RELATIONSHIP | ಸಂಬಂಧಗಳು ಯಾವಾಗ್ಲೂ ಫ್ರೆಶ್‌ ಆಗಿರ್ಬೇಕಾ? ಈ ಏಳು ಸೂತ್ರಗಳನ್ನು ಪಾಲಿಸಿ

ಸಂಬಂಧಗಳು ಸದಾ ತಾಜಾ ಆಗಿರಬೇಕು, ಇಲ್ಲವಾದ್ರೆ ಜೀವನ ಬೋರಿಂಗ್‌ ಎನಿಸಿಬಿಡುತ್ತದೆ. ಸಂಬಂಧ ಶುರುವಾಗುವಾಗ ಇದ್ದ ಉತ್ಸಾಹ ಬರುಬರುತ್ತಾ ಕಡಿಮೆಯಾಗುತ್ತದೆ. ಆದರೆ ಇದು ದೀರ್ಘಕಾಲದ ಉತ್ತರ ಅಲ್ಲ. ನಿಮ್ಮ ರಿಲೇಷನ್‌ಶಿಪ್‌ ಫ್ರೆಶ್‌ ಆಗಿರೋದಕ್ಕೆ ನೀವೇ ಕೆಲಸ ಮಾಡಬೇಕು, ಈ ಏಳು ಸೂತ್ರಗಳನ್ನು ಪಾಲಿಸಿನೋಡಿ..

  • ಭಾವನೆಗಳ ಬಗ್ಗೆ ಓಪನ್ ಆಗಿರಿ, ಎಲ್ಲವನ್ನೂ ಮನಸ್ಸಿನಲ್ಲಿಯೇ ನುಂಗಿಕೊಳ್ಳಬೇಡಿ ಒಂದು ದಿನ ಎಲ್ಲವೂ ವಾಂತಿಯಾಗುತ್ತದೆ, ಆಗ ರಂಪ ರಾಡಿಯಾಗೋದು ಗ್ಯಾರೆಂಟಿ!
  • ಪರಸ್ಪರ ನಂಬಿಕೆ ಇರಲಿ, ಇದು ನಿಮ್ಮ ಸಂಬಂಧದ ಫೌಂಡೇಷನ್ ಆಗಿರಲಿ.
  • ಗೌರವಕ್ಕೆ ಬೌಂಡರಿಗಳನ್ನು ಸೆಟ್ ಮಾಡಿಕೊಳ್ಳಿ, ಗಂಡ ಹೆಂಡತಿ ಅಥವಾ ಸಂಗಾತಿ ಎಂದರೆ ಎಲ್ಲ ಖುಲ್ಲಂ ಖುಲ್ಲಾ ಎಂದರ್ಥ ಅಲ್ಲ. ಇಬ್ಬರಿಗೂ ಪ್ರೈವೆಸಿ ಇರಲಿ. ಅದನ್ನು ಗೌರವಿಸುವ ಗುಣವೂ ಇರಲಿ.
  • ಇನ್ನೊಬ್ಬರು ಮಾತನಾಡುವಾಗ ಕೇಳಿಸಿಕೊಳ್ಳದೆ ಇರೋದು ಸಾಕಷ್ಟು ಮಂದಿ ಮಾಡುವ ತಪ್ಪು, ನಿಮ್ಮ ಟೆನ್ಶನ್ ಸಾವಿರ ಇರಲಿ, ಸಂಗಾತಿ ಮಾತಿಗೆ ಕಿವಿಯಾಗಿ.
  • ಒಬ್ಬರಿಗೊಬ್ಬರು ಪ್ರೀತಿ ಕರುಣೆ ಸದಾ ತೋರಿಸಿ, ಕಂಜೂಸಾಗಬೇಡಿ.
  • ಕೆಲಸದಲ್ಲಿ ಅಥವಾ ಬ್ಯುಸಿನೆಸ್‌ನಲ್ಲಿ ಒಬ್ಬರಿಗೊಬ್ಬರು ಸಪೋರ್ಟ್ ಮಾಡಿ.
  • ಯಾವುದೇ ನಿರ್ಧಾರವಿರಲಿ ಇಬ್ಬರೂ ಸೇರಿ ತೆಗೆದುಕೊಳ್ಳಿ.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!