WOMEN | ಈ 5 ಅಭ್ಯಾಸಗಳಿರೋ ಮಹಿಳೆಯರು ಬೇಗ ವಯಸ್ಸಾದಂತೆ ಕಾಣುತ್ತಾರಂತೆ!

ಕೆಲವು ಮಹಿಳೆಯರಿಗೆ ಐವತ್ತು ವರ್ಷವಾದ್ರೂ ಇನ್ನೂ ನಲವತ್ತಕ್ಕೆ ಬಿದ್ದಿರಬಹುದೇನೋ ಎನ್ನುವಂತೆ ಕಾಣುತ್ತಾರೆ. ಇನ್ನು ಹಲವರು ಬರೀ ಇಪ್ಪತ್ತು ವರ್ಷದವರಾದ್ರೂ ಮೂವತ್ತರಂತೆ ಕಾಣುತ್ತಾರೆ. ಇದಕ್ಕೆಲ್ಲಾ ಕಾರಣ ಲೈಫ್‌ಸ್ಟೈಲ್‌. ನಿಮ್ಮ ಮನೆಯ ದೇವರ ಗುಡಿಯನ್ನು ಹೇಗೆ ಶುಚಿಯಾಗಿ ಇಟ್ಟುಕೊಳ್ತೀರೋ ಹಾಗೇ ದೇಹ ಅಂತ ತಿಳಿದುಕೊಂಡರೆ ಎಲ್ಲ ರೀತಿಯ ಬದಲಾವಣೆಗಳನ್ನು ಕಾಣಬಹುದು. ಈ ಐದು ಅಭ್ಯಾಸಗಳಿರುವ ಮಹಿಳೆಯರು ಬೇಗ ವಯಸ್ಸಾದಂತೆ ಕಾಣಿಸುತ್ತಾರಂತೆ..

1. ಯಾವ ಮಹಿಳೆ ತನ್ನ ದೇಹವನ್ನು ದಂಡಿಸುವುದಿಲ್ಲವೋ, ವ್ಯಾಯಾಮ, ಯೋಗ, ವಾಕ್‌, ಜಿಮ್‌ ಯಾವ ಒಂದು ಅಭ್ಯಾಸವನ್ನೂ ರೂಢಿ ಮಾಡೋದಿಲ್ವೋ ಅಂತವರು ಬೇಗ ವಯಸ್ಸಾದಂತೆ ಕಾಣಿಸ್ತಾರೆ.

2. ಸದಾ ಕೆಲಸಕ್ಕೆ ಬರುವ ಹಾಗೂ ಬಾರದ ವಿಷಯಗಳ ಬಗ್ಗೆ ಚಿಂತೆ ಮಾಡುವ ಮಹಿಳೆ, ಒತ್ತಡದ ಲೈಫ್‌ ಸ್ಟೈಲ್‌ ಹೊಂದಿದ ಮಹಿಳೆ

3. ಸಣ್ಣ ಪುಟ್ಟ ವಿಷಯಕ್ಕೂ ಹಾಗೂ ದೊಡ್ಡ ವಿಷಯಗಳಿಗೂ ಕೋಪ ಮಾಡಿಕೊಳ್ಳುವುದು, ಕಿರುಚುವುದು, ರೇಗುವುದು ಮಾಡುವ ಮಹಿಳೆ

4. ಇಡೀ ದಿನದಲ್ಲಿ ನಾಲ್ಕೈದು ಲೋಟ ಮಾತ್ರ ನೀರು ಕುಡಿಯುವ ಮಹಿಳೆಯರ ಸ್ಕಿನ್‌ ಬೇಗನೆ ವಯಸ್ಸಾದಂತೆ ಸುಕ್ಕುಗಟ್ಟುತ್ತದೆ.

5. ಸರಿಯಾಗಿ ನಿದ್ದೆ ಮಾಡದ ಅಥವಾ ದಿನಕ್ಕೆ ನಾಲ್ಕೈದು ಗಂಟೆ ಮಾತ್ರ ನಿದ್ದೆ ಮಾಡುವ ಮತ್ತು ದಿನವೂ ಲೇಟಾಗಿ ಮಲಗುವ ಮಹಿಳೆ

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!