ಬೇಸಿಗೆಯಲ್ಲಿ ನಿಮ್ಮ ಮನೆ ಎಸಿ ಮತ್ತು ಕೂಲರ್ ಇಲ್ಲದೆ ತಂಪಾಗಿರಬೇಕೇ? ಹೀಗೆ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಸಿಗೆಯಲ್ಲಿ ತಾಪಮಾನ ಹೇಳತೀರದು. ಸೆಕೆ ತಾಳಲಾರದೆ ಜನ ಎಸಿ, ಫ್ಯಾನ್‌ಗಳ ಮೊರೆ ಹೋಗುತ್ತಾರೆ. ಆದರೆ ಎಲ್ಲರ ಮನೆಯಲ್ಲೂ ಇಂತಹ ವಸ್ತುಗಳು ಲಭ್ಯವಿರುವುದಿಲ್ಲ. ಕೆಲವರು ತಮ್ಮ ಮನೆಯ ಚಪ್ಪಡಿಗಳಿಗೆ ಬಿಳಿ ಬಣ್ಣ ಹಾಕುವ ಮೂಲಕ ತಾಪವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಾರೆ. ಪ್ರಸ್ತುತ ವಿದ್ಯುತ್ ಕಡಿತದಿಂದ ಮನೆಯಲ್ಲಿರುವ ಎಸಿ, ಕೂಲರ್ ಗಳೂ ಕೆಲಸ ಮಾಡುತ್ತಿಲ್ಲ. ಕಡಿಮೆ ಖರ್ಚಿನಲ್ಲಿ ಕರೆಂಟ್‌ನ ಅವಶ್ಯಕತೆಯಿಲ್ಲದೆ ಕೆಲವು ಸಲಹೆಗಳನ್ನು ಅನುಸರಿಸಿದರೆ ಸಾಕು ನಿಮ್ಮ ಮನೆಯನ್ನು ತಂಪಾಗಿಡಬಹುದು.

ಮಾರುಕಟ್ಟೆಯಲ್ಲಿ, ಸೂಪರ್ಮಾರ್ಕೆಟ್‌ಗಳಲ್ಲಿ ವೆಟಿವೇರ್ ಚಾಪೆಗಳು ಸಿಗುತ್ತವೆ. ಅವುಗಳನ್ನು ಖರೀದಿಸಿ ನಿಮ್ಮ ಮನೆಯ ಕಿಟಕಿಗಳ ಹೊರಭಾಗದಲ್ಲಿ ಅಳವಡಿಸಬೇಕು. ಅದನ್ನು ನೀರಿನಿಂದ ನೆನೆಸಿ ಮುಖ್ಯ ಕಿಟಕಿಯ ಮೇಲೆ ಹಾಕಿದರೆ, ಹೊರಗಿನಿಂದ ಬರುವ ಬಿಸಿಗಾಳಿ ತಣ್ಣಗಾಗಿ ಬರುತ್ತದೆ. ಜೊತೆಗೆ ವೆಟಿವೇರ್ ಪರಿಮಳ ಹಿತಕರವಾಗಿರುತ್ತದೆ. ಹೀಗೆ ಮಾಡುವುದರಿಂದ ತಾಜಾ ಗಾಳಿಯನ್ನು ಉಸಿರಾಡಲು ಸಾಧ್ಯವಾಗುತ್ತದೆ.  ಮೊದಲು ಇವುಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಕೂಲರ್‌ಗಳು ಬಂದ ಮೇಲೆ ಅವುಗಳ ಬಳಕೆ ಕಡಿಮೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!