ಹೊಸದಿಗಂತ ಡಿಜಿಟಲ್ ಡೆಸ್ಕ್;
ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ರೈಲ್ವೆ ಶೋಕಾಸ್ ನೋಟಿಸ್ ನೀಡಿದೆ ಎಂದು ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ಅವರು ಹೇಳಿದ್ದಾರೆ.
ಇಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇಣುಗೋಪಾಲ್ ಅವರು, ಫೋಗಟ್ ಅವರ ಏಕೈಕ ಅಪರಾಧವೆಂದರೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಿರುವುದು. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ವಿನೇಶ್ ಫೋಗಟ್ ಅವರು ಕೆಲಸ ತೊರೆಯುವಾಗ ಮಾಡಬೇಕಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಎಂದು ವೇಣುಗೋಪಾಲ್ ರೈಲ್ವೆಗೆ ಒತ್ತಾಯಿಸಿದರು.
ಇಂದು ಬೆಳಗ್ಗೆ ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ಕಾಂಗ್ರೆಸ್ ಸೇರುವ ಮೊದಲು ಭಾರತೀಯ ರೈಲ್ವೆಯಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ಸೇರಿದ್ದಾರೆ.
ಒದ್ದು ಹೊರಗೆ ಹಾಕಲಿ
ಹೆಣ್ಮಕ್ಕ್ಲಾ ಶೋಷಣೆ ಮಾಡೋರನ್ನ ತೊಡೆ ಮೇಲೆ ಕೂರಿಸ್ತೀರಾ ಮತ್ತು ಕಷ್ಟ ಪಟ್ಟು ದೇಶಕ್ಕೆ ಒಳ್ಳೆ ಹೆಸರು ತರೋರನ್ನ ಒದಿತೀರ , ಇದೆ ಕಾರಣಕ್ಕಾಗಿ ನಮ್ಮ ದೇಶ ಎಂದಿಗೂ ಚೇನ ಹಾಗು ಅಮೇರಿಕಾ ಹಿಂದಿಕ್ಕಲು ಸಾಧ್ಯವಿಲ್ಲ , ಕ್ರೀಡಾ ಪಟ್ಟುಗಳಿಗೆ , ರೈತರಿಗೆ ಹಾಗು ಯೋಧರಿಗೆ ನಮ್ಮ ದೇಶದಲ್ಲಿ ಗೌರವವಿಲ್ಲ .