ವಿಚಾರಣೆಗೆ ಹಾಜರಾಗಿ: ಪಾಕ್ ಪ್ರಧಾನಿ ಶಹಬಾಜ್‌ಗೆ ಶೋಕಾಸ್ ನೋಟಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ 16 ಶತಕೋಟಿ ಡಾಲರ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೆ.7ರಂದು ವಿಚಾರಣೆಗೆ ಹಾಜರಾಗುವಂತೆ, ಪಾಕಿಸ್ಥಾನದ ವಿಶೇಷ ನ್ಯಾಯಾಲಯ ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಮತ್ತು ಆತನ ಪುತ್ರ ಹಂಜ ಶಹಬಾಜ್‌ಗೆ ಶನಿವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಪಾಕಿಸ್ಥಾನದ ಫೆಡರಲ್ ಇನ್‌ವೆಸ್ಟಿಗೇಶನ್ ಏಜೆನ್ಸಿಯು (ಎಫ್‌ಐಎ) 70 ವರ್ಷದ ಶಹಬಾಜ್ ಮತ್ತವರ ಪುತ್ರರಾದ ಹಂಜ, ಸುಲೈಮಾನ್ ವಿರುದ್ಧ 2020ರ ನವೆಂಬರ್‌ನಲ್ಲಿ ಪ್ರಕರಣ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸುತ್ತಿರುವ ಲಾಹೋರ್‌ನ ವಿಶೇಷ ನ್ಯಾಯಾಲಯವು ತಂದೆ, ಮಗನಿಗೆ ಈಗಾಗಲೆ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ತಂದೆ -ಮಗ ಶನಿವಾರ ಕೋರ್ಟ್‌ಗೆ ವಿಚಾರಣೆಗೆ ಹಾಜರಾಗಿರಲಿಲ್ಲ.

ಶಹಬಾಜ್ ಅವರ ಆರೋಗ್ಯ ಸರಿಯಿಲ್ಲದ ಕಾರಣ ಪ್ರಯಾಣ ಕೂಡದೆಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ಇದೊಂದು ಬಾರಿ ವಿನಾಯಿತಿ ನೀಡಿ ಎಂದು ಶಹ್‌ಬಾಜ್ ಪರ ವಕೀಲ ಅಮ್ಜದ್ ಪರ್ವೇಜ್ ನ್ಯಾಯಾಲಯವನ್ನು ಕೋರಿದ್ದರು. ತನ್ನ ಕಕ್ಷಿದಾರನಿಗೆ ತೀವ್ರ ಬೆನ್ನು ನೋವು, ಹಾಗಾಗಿ ವಿಶ್ರಾಂತಿ ಅಗತ್ಯವಿದೆ ಎಂದು ಹಂಝ ಪರ ವಕೀಲ ರಾವ್ ಔರಂಗಜೇಬ್ ನ್ಯಾಯಾಲಯಕ್ಕೆ ತಿಳಿಸಿದರು. ಎಫ್‌ಐಎ ಪ್ರಾಸಿಕ್ಯೂಟರ್ ಫಾರೂಕ್ ಬಜ್ವಾ ಆಕ್ಷೇಪ ವ್ಯಕ್ತಪಡಿಸದ ಕಾರಣ ತಂದೆ-ಮಗನಿಗೆ ನ್ಯಾಯಾಲಯ ವಿನಾಯಿತಿ ನೀಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!