ಬರ್ತಿದೆ ಪ್ರಧಾನಿ ಮೋದಿ ಪೆನ್‌ನಲ್ಲಿ ಅರಳಿದ ಗುಜರಾತಿ ಕವನ ಸಂಕಲನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಬರೆದಿರುವ ಗುಜರಾತಿ ಕವನ ಸಂಕಲನದ ಇಂಗ್ಲಿಷ್ ಆವೃತ್ತಿ ಲೆಟರ್‍ಸ್ ಟು ಸೆಲ್ಫ್ ಆಗಸ್ಟ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ

ಪತ್ರಕರ್ತೆ ಹಾಗೂ ಇತಿಹಾಸಕಾರರಾದ ಭಾವನಾ ಸೋಮಾಯಾ ಆಂಗ್ಲ ಆವೃತ್ತಿಯನ್ನು ಭಾಷಾಂತರಿಸಿದ್ದಾರೆ. ಮೋದಿ ಅವರು ಸುದೀರ್ಘ ವರ್ಷಗಳಲ್ಲಿ ಬರೆದಂತಹ ಗುಜರಾತಿ ಕವನಗಳ ಸಂಕಲನ 2007ರಲ್ಲಿ ಬಿಡುಗಡೆಯಾಗಿತ್ತು. ಮುಖ್ಯವಾಗಿ ಪ್ರಾಕೃತಿಕ ಸೌಂದರ್ಯದಿಂದ ಹಿಡಿದು ಬದುಕಿನ ಒತ್ತಡಗಳ ಬಿಂಬಿಸುವ ಆಂಖ್ ಆ ಧನ್ಯ ಮತ್ತಿತರ ಹಲವು ಚಿತ್ತಾಕರ್ಷಕ ಕವನಗಳು ಗಾಢ ವಿಮರ್ಶೆ, ಚಿಂತನೆಯಿಂದ ಸಂಪನ್ನಗೊಂಡಿವೆ.

ಛಂದಸ್ಸುಗಳಿಂದ ತುಂಬಿದ್ದು, ಅತ್ಯಂತ ಪ್ರಾಸಬದ್ಧವಾಗಿವೆ. ಪ್ರಕೃತಿ ಬಗ್ಗೆ ಅಥವಾ ಜೀವನದ ಹಲವು ಜಂಜಾಟ ಕುರಿತು ತಮ್ಮ ಚಿಂತನೆ, ಕನಸುಗಳು ಮತ್ತು ಕಳವಳ ಇತ್ಯಾದಿಗಳನ್ನು ಮೋದಿ ಕವನಗಳ ಮುಖೇನ ಜಗತ್ತಿನ ಜತೆ ಹಂಚಿಕೊಂಡಿದ್ದಾರೆ. ಫಿಂಗರ್‌ಪ್ರಿಂಟ್ ಪ್ರಸ್ತುತ ಕಾವ್ಯದ ಪ್ರಕಾಶಕರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!