July 3, 2026
Friday, July 3, 2026
spot_img

ಮೈದಾನದಲ್ಲಿ ಕೋಪ ತೋರಿಸಿದ್ದು ಈಗ ದುಬಾರಿ ಆಯ್ತು: ರಘುವಂಶಿಗೆ ಬಿತ್ತು 4.ಲಕ್ಷ ರೂ. ಫೈನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲ್ಕತ್ತಾ ನೈಟ್ ರೈಡರ್ಸ್ ಯುವ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ ಮೈದಾನದಲ್ಲಿನ ವರ್ತನೆಯ ಕಾರಣಕ್ಕೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ತೀರ್ಪಿನ ಬಳಿಕ ತೋರಿದ ಅಸಮಾಧಾನ ಅವರಿಗೆ ದುಬಾರಿಯಾಗಿ ಪರಿಣಮಿಸಿದೆ.

‘ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ’ ಕಾರಣಕ್ಕಾಗಿ ಔಟ್ ನೀಡಿದ ತೀರ್ಪಿನಿಂದ ಬೇಸರಗೊಂಡ ರಘುವಂಶಿ, ಮೈದಾನ ತೊರೆಯುವಾಗ ಬೌಂಡರಿ ಲೈನ್‌ನಲ್ಲಿದ್ದ ಕುಶನ್‌ಗಳಿಗೆ ಬ್ಯಾಟ್‌ನಿಂದ ಹೊಡೆದಿದ್ದು, ಬಳಿಕ ಡಗೌಟ್‌ನಲ್ಲಿ ಹೆಲ್ಮೆಟ್ ಎಸೆದು ಕೋಪ ವ್ಯಕ್ತಪಡಿಸಿದ್ದರು. ಈ ವರ್ತನೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ:

ಇದರಿಂದ ಅವರ ಪಂದ್ಯದ ಸಂಭಾವನೆಯ ಶೇ.20 ರಷ್ಟು ದಂಡ ವಿಧಿಸಲಾಗಿದ್ದು, ಸುಮಾರು 4.28 ಲಕ್ಷ ರೂಪಾಯಿ ಪಾವತಿಸಬೇಕಾಗಿದೆ. ಜೊತೆಗೆ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ.

ರಘುವಂಶಿ ತಮ್ಮ ತಪ್ಪನ್ನು ಒಪ್ಪಿಕೊಂಡು ಶಿಕ್ಷೆಯನ್ನು ಅಂಗೀಕರಿಸಿದ್ದಾರೆ. ಯುವ ಆಟಗಾರನ ಈ ನಡೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಪಂದ್ಯಗಳಲ್ಲಿ ಅವರು ಹೇಗೆ ಕಮ್‌ಬ್ಯಾಕ್ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !