ಶ್ರದ್ಧಾ ಹತ್ಯೆ ಪ್ರಕರಣ: ಗುರುಗ್ರಾಮದ ಅರಣ್ಯ ಪ್ರದೇಶದಲ್ಲಿ ಮಾರಕಾಸ್ತ್ರ ಎಸೆದಿರುವುದಾಗಿ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಪೂನಾವಾಲಾ ಮಾರಕಾಸ್ತ್ರವನ್ನು ಗುರುಗ್ರಾಮ್‌ನ ಡಿಎಲ್‌ಎಫ್ 3ನೇ ಹಂತದಲ್ಲಿ ಎಸೆದಿರುವುದಾಗಿ ದೆಹಲಿ ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ. ಆರೋಪಿ ಅಫ್ತಾಬ್ ದೇಹವನ್ನು ಕತ್ತರಿಸಲು ಬಳಸಿದ ಮಾರಕಾಸ್ತ್ರ ಮೆಹ್ರೌಲಿ ಪ್ರದೇಶದಲ್ಲಿ ಕಸದ ರಾಶಿಗೆ ಎಸೆದಿರುವುದಾಗಿ ಬಾಯ್ಬಿಟ್ಟಿದ್ದಾನೆಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ದೆಹಲಿ ಪೊಲೀಸ್ ತಂಡವು ಮಾರಕಾಸ್ತ್ರ ಮರುಪಡೆಯಲು ಗುರುಗ್ರಾಮ್‌ನ ಅರಣ್ಯ ಪ್ರದೇಶದಲ್ಲಿ ಇದುವರೆಗೆ ಎರಡು ಬಾರಿ ಹುಡುಕಾಟ ನಡೆಸಿದೆ. ನವೆಂಬರ್ 18 ರಂದು ತನಿಖೆಯ ಮೊದಲ ದಿನ, ದೆಹಲಿ ಪೊಲೀಸ್ ತಂಡವು ಗುರುಗ್ರಾಮ್‌ನ ಪೊದೆಗಳಿಂದ ಕೆಲವು ಪುರಾವೆಗಳನ್ನು ಕಂಡುಕೊಂಡಿದೆ, ಇದನ್ನು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ (ಸಿಎಫ್‌ಎಸ್‌ಎಲ್) ತನಿಖೆಗೆ ಕಳುಹಿಸಲಾಗಿದೆ. ನವೆಂಬರ್ 19 ರಂದು ಎರಡನೇ ದಿನ ಮೆಟಲ್ ಡಿಟೆಕ್ಟರ್‌ನೊಂದಿಗೆ ಹುಡುಕಿದರೂ ಅಲ್ಲಿ ಏನೂ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಐದು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ನಂತರ ಆಫ್ತಾಬ್‌ನನ್ನು ಇಲ್ಲಿನ ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಅಫ್ತಾಬ್‌ನ ಪೊಲೀಸ್ ಕಸ್ಟಡಿಯನ್ನು ನ್ಯಾಯಾಲಯ ಮುಂದಿನ ನಾಲ್ಕು ದಿನಗಳವರೆಗೆ ವಿಸ್ತರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!