Saturday, December 9, 2023

Latest Posts

ಶ್ರದ್ಧಾ ಹತ್ಯೆ ಪ್ರಕರಣ: ಮೆಹ್ರೌಲಿ ಅರಣ್ಯದಲ್ಲಿ ಸಿಕ್ಕಿತು ತಲೆಬುರುಡೆಯ ಭಾಗ, ಎಲುಬು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ಹತ್ಯೆ ಪ್ರಕರಣದ ದಿನಕ್ಕೊಂದು ಮಾಹಿತಿ ಹೊರಬರುತ್ತಿದ್ದು, ದೆಹಲಿ ಪೊಲೀಸರು ಮೆಹ್ರೌಲಿ ಅರಣ್ಯದಿಂದ ಶ್ರದ್ಧಾಳ ಹೆಚ್ಚಿನ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ.

ಅರಣ್ಯದಿಂದ ತಲೆಬುರುಡೆಯ ಭಾಗ, ಶಿರಚ್ಛೇದಿತ ದವಡೆ ಮತ್ತು ಹೆಚ್ಚಿನ ಮೂಳೆಗಳು ಇಂದು(ಭಾನುವಾರ) ಪತ್ತೆಯಾಗಿವೆ. ಶ್ರದ್ಧಾ ಅವರ ತಂದೆಯ ಡಿಎನ್‌ಎ ಮಾದರಿಗಳೊಂದಿಗೆ ಹೊಂದಾಣಿಕೆ ಮಾಡಲು ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ಈಗಾಗಲೇ ಶ್ರದ್ಧಾಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ಮುಚ್ಚಿಟ್ಟಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದಾನೆ. ಶ್ರದ್ಧಾಳನ್ನು ಕೊಲೆ ಮಾಡಿದ ನಂತರ ಮನೆಯಲ್ಲಿ ಸಿಕ್ಕಿದ್ದ ಮೂರು ಚಿತ್ರಗಳನ್ನು ನಾಶಪಡಿಸಿದ್ದಾನೆ. ಪೊಲೀಸರು ಅಫ್ತಾಬ್‌ನ ಚತ್ತರ್‌ಪುರದ ಫ್ಲಾಟ್‌ನಿಂದ ಶ್ರದ್ಧಾಳ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದು ಆಕೆ ಕೆಲವು ಬಟ್ಟೆಗಳು ಮತ್ತು ಶೂಗಳು ಪತ್ತೆಯಾಗಿವೆ.

ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು, ಆರಂಭದಲ್ಲಿ 8 ರಿಂದ 10 ಮೂಳೆಗಳನ್ನು ವಶಪಡಿಸಿಕೊಂಡರು, ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆಯಲ್ಲಿ ಎರಡನೇ ಪ್ರಮುಖ ಸ್ಥಳವೆಂದರೆ ಅಫ್ತಾಬ್ ಪೂನಾವಾಲಾನ ಚತ್ತರ್‌ಪುರ ಫ್ಲ್ಯಾಟ್ ನಲ್ಲಿ ಶೋಧ ನಡೆಸಿದ್ದಾರೆ.

ಇನ್ನು ತನಿಖೆಯ ಮೂರನೇ ಪ್ರಮುಖ ಸ್ಥಳವೆಂದರೆ ಗುರುಗ್ರಾಮ್, ಅಫ್ತಾಬ್ ಕೊನೆಯದಾಗಿ ಕೆಲಸ ಮಾಡುತ್ತಿದ್ದ ಕಾಲ್ ಸೆಂಟರ್ ಹತ್ತಿರದ ಪ್ರದೇಶ. ಕಳೆದ ಮೂರು ದಿನಗಳಿಂದ ಪೊಲೀಸರು ಪ್ರತಿದಿನ ಅರಣ್ಯವನ್ನು ಶೋಧಿಸುತ್ತಿದ್ದಾರೆ.

ಪೊಲೀಸರು ನಿನ್ನೆ ಅಫ್ತಾಬ್‌ನ ಫ್ಲಾಟ್‌ನಿಂದ ಚೂಪಾದ ಕತ್ತರಿಸುವ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಶ್ರದ್ಧಾ ವಾಕರ್ ದೇಹವನ್ನು ಕತ್ತರಿಸಲು ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!