ಶ್ರೇಯಸ್​ ಅಯ್ಯರ್ ಮುಡಿಗೆ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ಬ್ಯಾಟರ್ ಶ್ರೇಯಸ್​ ಅಯ್ಯರ್ ಫೆಬ್ರವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಅಮೆಲಿಯಾ ಕೆರ್​ ಪಾತ್ರರಾಗಿದ್ದಾರೆ.
ಶ್ರೇಯಸ್​ ಅಯ್ಯರ್ ತವರಿನಲ್ಲಿ ನಡೆದ ವೆಸ್ಟ್​ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.
ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಒಂದೂ ಪಂದ್ಯದಲ್ಲೂ ವಿಕೆಟ್ ಒಪ್ಪಿಸದೆ ದಾಖಲೆಯ 204ರನ್​ ಸಿಡಿಸಿ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಅವರು ಪಂದ್ಯಗಳಲ್ಲಿ ಕ್ರಮವಾಗಿ 57(28), 74(44) ಮತ್ತು 73(45) ರನ್​ಳಿಸಿದ್ದರು.
ಫೆಬ್ರವರಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾಜನಾಗಿರುವ ನ್ಯೂಜಿಲಂಡ್ ನ ಅಮೆಲಿಯಾ ಕೆರ್​​ ವಿಶ್ವಕಪ್​ಗೂ ಮುನ್ನ ನಡೆದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರು.
ನ್ಯೂಜಿಲ್ಯಾಂಡ್​​ ಆಲ್​ರೌಂಡರ್ 117ರ ಸರಾಸರಿಯಲ್ಲಿ​ 353 ರನ್​ ಮತ್ತು 7 ವಿಕೆಟ್ ಪಡೆದಿದ್ದರು. 2ನೇ ಮತ್ತು 4ನೇ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!