Sunday, February 5, 2023

Latest Posts

ʻದಕ್ಷಿಣ ಸಿನಿಮಾ, ಉತ್ತರ ಸಿನಿಮಾ ಎಂದು ಪ್ರತ್ಯೇಕಿಸಿ ಮಾತನಾಡುವುದು ಸರಿಯಲ್ಲʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಯಕಿ ಶ್ರುತಿ ಹಾಸನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿರಿಯ ನಾಯಕರಿಗೆ ಶ್ರುತಿ ಮೊದಲ ಆಯ್ಕೆಯಾಗಲಿದ್ದಾರೆ. ಸದ್ಯ, ಶೃತಿ ಅಭಿನಯದ ಬಾಲಯ್ಯ ವೀರಸಿಂಹ ರೆಡ್ಡಿ ಮತ್ತು ಚಿರಂಜೀವಿ ಜೊತೆ ವಾಲ್ತೇರು ವೀರಯ್ಯ ಎರಡು ಚಿತ್ರಗಳು ಸಂಕ್ರಾಂತಿಗೆ ಬಿಡುಗಡೆಯಾಗುತ್ತಿವೆ. ಈ ಎರಡು ಚಿತ್ರಗಳು ಭರ್ಜರಿ ಯಶಸ್ಸು ಕಾಣಲಿದೆ ಎಂಬ ಸಂಪೂರ್ಣ ಭರವಸೆ ಈ ನಟಿಗಿದೆ.

ಈ ಸಂಕ್ರಾಂತಿಯಂದು ಶ್ರುತಿ ಹಾಸನ್ ಎರಡು ಚಿತ್ರಗಳೊಂದಿಗೆ ತೆರೆಗೆ ಬರುತ್ತಿದ್ದು, ಕಳೆದ ಕೆಲವು ದಿನಗಳಿಂದ ಶೃತಿ ಹಾಸನ್‌ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಸೌತ್ ಮತ್ತು ನಾರ್ತ್ ಸಿನಿಮಾಗಳ ಬಗ್ಗೆ ಶ್ರುತಿ ಹಾಸನ್ ಕಾಮೆಂಟ್ ಮಾಡಿದ್ದಾರೆ.

ʻನನ್ನ ತಂದೆ ಈಗಾಗಲೇ ಎಲ್ಲಾ ಭಾಷೆಯ ಸಿನಿಮಾ ಮಾಡಿದ್ದಾರೆ. ಪ್ಯಾನ್ ಇಂಡಿಯಾ ನಮ್ಮ ಮನೆಯಲ್ಲಿದೆ. ನಮ್ಮ ಮನೆಯಲ್ಲಿ ಪ್ಯಾನ್ ಇಂಡಿಯಾ ಆಹಾರ, ದಕ್ಷಿಣ ಮತ್ತು ಉತ್ತರ ರಾಜ್ಯಗಳ ಎರಡೂ ಆಹಾರ ತಿನ್ನುತ್ತೇವೆ. ನಮ್ಮ ಮನೆಯಲ್ಲಿ ತೆಲುಗು, ತಮಿಳು, ಹಿಂದಿ, ಇಂಗ್ಲಿಷ್… ಎಲ್ಲಾ ಭಾಷೆಗಳನ್ನು ಮಾತನಾಡುತ್ತಾರೆ. ನನ್ನ ತಂದೆ ನಮಗೆ ಅದೇ ವಿಷಯವನ್ನು ಹೇಳುತ್ತಾರೆ. ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ಎಂದು ಪ್ರತ್ಯೇಕಿಸಬೇಡಿ. ಎಲ್ಲವೂ ಭಾರತೀಯ ಸಿನಿಮಾ. ನಿಮಗೆ ಭಾಷೆ ಬೇಕಾದರೆ ನೀವು ಮಾತನಾಡಬಹುದು ಆದರೆ ಸಿನಿಮಾ ಒಂದೇ. ದಕ್ಷಿಣ ಮತ್ತು ಉತ್ತರವನ್ನು ಪ್ರತ್ಯೇಕವಾಗಿ ನೋಡುವುದು ಸರಿಯಲ್ಲ. ಈಗ ದಕ್ಷಿಣ ಮತ್ತು ಉತ್ತರ ಒಟ್ಟಿಗೆ ಕೆಲಸ ಮಾಡುತ್ತಿವೆ ಮತ್ತು ಅತ್ಯಂತ ಆರೋಗ್ಯಕರ ವಾತಾವರಣವಿದೆ ಎಂದು ಹೇಳಿರುವ ಶ್ರುತಿ ಹಾಸನ್ ಕಾಮೆಂಟ್ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!