ಬಾಲಿವುಡ್ ನಟಿ ಸಾರಾ ಜೊತೆ ಶುಭಮನ್ ಗಿಲ್ ಡೇಟಿಂಗ್: ಈ ಕುರಿತು ಮೌನ ಮುರಿದ ಕ್ರಿಕೆಟಿಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಭಾರತ ಕ್ರಿಕೆಟಿಗ ಶುಭಮನ್ ಗಿಲ್ ನಡುವಿನ ಸಂಬಂಧದ ಕುರಿತು ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದು, ಆದರೆ ಈ ಬಗ್ಗೆ ಸಾರಾ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇದೀಗ ಗಿಲ್ ದೊಡ್ಡ ಸುಳಿವು ನೀಡಿದ್ದಾರೆ.

ಶುಭಮನ್ ಇತ್ತೀಚೆಗೆ ಪ್ರೀತಿ ಸಿಮೋಸ್ ಮತ್ತು ಅವರ ಸಹೋದರಿ ನೀತಿ ಸಿಮೋಸ್ ಅವರ ಪಂಜಾಬಿ ಶೋ ‘ದಿಲ್ ದಿಯಾನ್ ಗಲ್ಲನ್’ನಲ್ಲಿ ಭಾಗವಹಿಸಿದ್ದರು. ಈ ವೇಳೆ ಬಾಲಿವುಡ್‌ನ ಅತ್ಯಂತ ಫಿಟ್ ನಟಿಯ ಬಗ್ಗೆ ಕೇಳಿದಾಗ, ಸಾರಾ ಅಲಿ ಖಾನ್ ಹೆಸರನ್ನು ತೆಗೆದುಕೊಂಡಿದ್ದಾರೆ.

ಮತ್ತೆ ಶುಭಮನ್ ಬಳಿ ನೀವು ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ ಎಂದು ಕೇಳಲಾಯಿತು, ಈ ವೇಳೆ ‘ಬಹುಶಃ’ ಎಂದು ಉತ್ತರ ನೀಡಿದ್ದಾರೆ ಆಗ ನಿರೂಪಕಿ ಸೋನಂ ‘ಸಾರಾ ಅವರ ಬಗ್ಗೆ ಸಂಪೂರ್ಣ ಸತ್ಯವನ್ನು ಹೇಳು’ ಎಂದು ಹೇಳಿದರು. ಈ ವೇಳೆ ‘ಸರ ದ ಸಾರಾ ಸಚ್ ಬೋಲ್ ದಿಯಾ. ಇರಬಹುದು ಇಲ್ಲದೆ ಇರಬಹುದು’ ಎಂದು ಹೇಳಿದ್ದಾರೆ.

ಈ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಗಿಲ್ ಉತ್ತರಗಳು ಅವರ ಮತ್ತು ಸಾರಾ ಸಂಬಂಧದ ದೊಡ್ಡ ಸುಳಿವು ನೀಡಿದಂತಾಗಿದೆ.

ಈ ಹಿಂದೆಯೂ ಅವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!