ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಆರಂಭಕ್ಕೂ ಮುನ್ನವೇ ಸ್ಟಾರ್ ಪ್ಲೇಯರ್ ಶುಭ್‌ಮನ್ ಗಿಲ್‌ಗೆ ಡೆಂಗ್ಯೂ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಗಿಲ್ ಆರೋಗ್ಯ ಸುಧಾರಿಸಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಶುಭ್‌ಮನ್ ದಾಖಲಾಗಿದ್ದರು. ಪ್ಲೇಟ್‌ಲೆಟ್‌ಗಳ ಕೊರತೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಡಿಸ್ಚಾರ್ಜ್ ಆಗಿ ಹೊಟೇಲ್ ರೂಂಗೆ ತೆರಳಿದ್ದಾರೆ.
ಇಂದು ದೆಹಲಿಯಲ್ಲಿ ಆಫ್ಘಾನ್ ವಿರುದ್ಧದ ಪಂದ್ಯಕ್ಕೆ ಗಿಲ್ ಲಭ್ಯವಿಲ್ಲ, ಇನ್ನು ಅ.೧೪ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಗಿಲ್ ಲಭ್ಯವಾಗುವುದು ಅನುಮಾನವಾಗಿದೆ.