ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತ ಲಂಕಾ ಪಡೆಯನ್ನು ಸೋಲಿಸಿ ಸೆಮೀಸ್ನತ್ತ ಹೆಜ್ಜೆಯಿಟ್ಟಿದೆ.
ನಿನ್ನೆ ಭಾರತ ಬರೋಬ್ಬರಿ 357ರನ್ ಸಿಡಿಸಿದ್ದು, ಶುಭ್ಮನ್ ಗಿಲ್ 92 ರನ್ ಗಳಿಸಿದ್ದರು. ಮೂವರು ಆಟಗಾರರು ಇನ್ನೇನು ಶತಕ ಬಾರಿಸಬೇಕು ಎನ್ನುವಾಗ ಔಟ್ ಆಗಿ ಕ್ರೀಡಾಭಿಮಾನಿಗಳಿಗೆ ನಿರಾಸೆಯಾಗಿತ್ತು.
ಶುಭ್ಮನ್ 82ರನ್ಗೆ ಔಟ್ ಆದಾಗ ನಿರಾಸೆ ವ್ಯಕ್ತಪಡಿಸಿದ್ದು, ಬ್ಯಾಟ್ನ್ನು ನೆಲಕ್ಕೆ ಗುದ್ದಿದ್ದಾರೆ, ಈ ವೇಳೆ ಕ್ಯಾಮೆರಾಮೆನ್ ಸಾರಾ ತೆಂಡೂಲ್ಕರ್ ರಿಯಾಕ್ಷನ್ ಕ್ಯಾಪ್ಷರ್ ಮಾಡಿದ್ದು, ಬೇಸರದಲ್ಲಿ ಸಾರಾ ಕಾಣಿಸಿದ್ದಾರೆ. ಇಬ್ಬರೂ ಡೇಟಿಂಗ್ನಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಸಾರಾ ರಿಯಾಕ್ಷನ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
Sara Tendulkar. 💔😭 #ShubmanGill #INDvsSL pic.twitter.com/xjcfcjIRN3
— Atishay Jain (@AtishayyJain96) November 2, 2023