ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಬ್ಬೊಬ್ಬರಿಗೆ ಒಂದೊಂದು ರೀತಿಯ ರುಚಿ ಇಷ್ಟ. ಒಬ್ಬರಿಗೆ ಖಾರ, ಒಬ್ಬರಿಗೆ ಸಪ್ಪೆ, ಹುಳಿ, ಸಿಹಿ ಹೀಗೆ ಒಂದೊಂದು ನಾಲಿಗೆಯೂ ಒಂದೊಂದು ರುಚಿಯನ್ನು ಬಯಸುತ್ತದೆ. ಅದರಲ್ಲೂ ಹೆಚ್ಚಿನ ಜನ ಖಾರ ತಿನ್ನಲು ಇಷ್ಟಪಡುತ್ತಾರೆ. ಹೆಚ್ಚಿನ ಖಾರ ಸೇವೆ ಆರೋಗ್ಯಕ್ಕೆ ಒಳ್ಳೆಯದಲ್ಲ.
- ಅಧಿಕ ಮಸಾಲೆಯುಕ್ತ ಪದಾರ್ಥಗಳಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ನೀವು ಈಗಾಗಲೇ ಅಧಿಕ ಬಿಪಿ ರೋಗಿಗಳಾಗಿದ್ದರೆ ಮೆಣಸಿನಕಾಯಿ..ಮಸಾಲೆ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ.
- ಅತಿಯಾದ ಖಾರ ಸೇವನೆಯಿಂದ ತ್ವಚೆಯಲ್ಲಿ ತೇವಾಂಶದ ನಷ್ಟ ಮತ್ತು ಶುಷ್ಕತೆಯಂತಹ ಚರ್ಮದ ಸಮಸ್ಯೆಗಳು ಉಂಟಾಗಬಹುದು.
- ಹೆಚ್ಚಿನ ಪ್ರಮಾಣದಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಏಕೆಂದರೆ ಇದರಲ್ಲಿ ಕ್ಯಾಲೋರಿ ಅಧಿಕವಾಗಿದ್ದು ತಿಂದ ನಂತರವೂ ಹಸಿವಾಗುವಂತೆ ಮಾಡುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.
- ಇದಲ್ಲದೆ, ಮಸಾಲೆಗಳನ್ನು ತಿನ್ನುವವರಿಗೆ ಹೆಚ್ಚಾಗಿ ಪೈಲ್ಸ್ ಬರುತ್ತದೆ ಎಂದು ವೈದ್ಯರು ಎಚ್ಚರಿಸುತ್ತಾರೆ.