ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಿದ ಶುಭ್‌ಮನ್ ಗಿಲ್- ಸಾರಾ ತೆಂಡೂಲ್ಕರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವೊಮ್ಮೆ ಸೆಲೆಬ್ರಿಟಿಗಳು ಒಂದೇ ರೆಸೋರೆಂಟ್ ಅಥವಾ ಬೀಚ್‌ಗೆ ತೆರಳಿ, ಸೆಪರೇಟ್ ಆದ ಫೋಟೊಸ್ ಮಾತ್ರ ಹಾಕುತ್ತಾರೆ. ಆದರೆ ಒಂದೇ ಜಾಗದಲ್ಲಿ ಇರುವ ಎರಡು ಫೋಟೊಗಳನ್ನು ಗಮನಿಸುವಂತೆಯೇ ಫೋಟೊಸ್ ಅಪ್‌ಲೋಡ್ ಮಾಡುತ್ತಾರೆ.

ಈ ತಂಡಕ್ಕೆ ಸಾರಾ ತೆಂಡೂಲ್ಕರ್- ಶುಭ್‌ಮನ್ ಗಿಲ್ ಕೂಡ ಸೇರಿದ್ದಾರೆ. ವ್ಯಾಲೆಂಟೀನ್ಸ್ ಡೇ ಡಿನ್ನರ್ ಮಾಡಿರೋ ಜೋಡಿ, ಸಪರೇಟ್ ಫೋಟೊಸ್ ಹಾಕಿಯೂ ಸಿಕ್ಕಿಹಾಕಿಕೊಂಡಿದ್ದಾರೆ. ಈಗಾಗಲೇ ಇವರು ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿದೆ. ಇದೀಗ ಇದಕ್ಕೆ ಪುಷ್ಠಿ ಕೊಡುವಂತೆ, ಇಬ್ಬರೂ ಡೇಟಿಂಗ್ ಫೋಟೊ ಹಂಚಿಕೊಂಡಿದ್ದಾರೆ.

ಇವರು ಬೇಕಂತಲೇ ಮಾಡ್ತಾರೋ ಅಥವಾ ಗೊತ್ತಿಲ್ಲದೆ ಮಾಡಿದ್ದಾರೋ ಅವರಿಗೆ ಮಾತ್ರ ಗೊತ್ತು ಅಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!