Tuesday, March 28, 2023

Latest Posts

3ನೇ ತ್ರೈಮಾಸಿಕದಲ್ಲಿ 820ಕೋಟಿ ರೂ. ಲಾಭ ದಾಖಲಿಸಿದ ಅದಾನಿ ಎಂಟರ್‌ಪ್ರೈಸಸ್: ಮಾರುಕಟ್ಟೆ ಚಂಚಲತೆ ತಾತ್ಕಾಲಿಕವೆಂದ ಗೌತಮ್‌ ಅದಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ ಬರ್ಗ್‌ ತನಿಖಾ ಸಂಸ್ಥೆಯ ಆರೋಪಗಳಿಂದಾಗಿ ಷೇರು ಮಾರುಕಟ್ಟೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಅದಾನಿ ಎಂಟರ್‌ಪ್ರೈಸಸ್‌ ತನ್ನ ಮೂರನೇ ತ್ರೈಮಾಸಿಕದ ಲಾಭದಲ್ಲಿ 820 ಕೋಟಿ ರೂ. ಲಾಭ ದಾಖಲಿಸಿದೆ. ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ 12 ಕೋಟಿ ರೂ. ನಷ್ಟ ಅನುಭವಿಸಿತ್ತು.

ಈ ಕುರಿತು ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ಈ ಕುರಿತು ಪ್ರತಿಕ್ರಿಯಿಸಿದ್ದು ʼಪ್ರಸ್ತುತ ಮಾರುಕಟ್ಟೆ ಚಲನೆ ತಾತ್ಕಾಲಿಕವಾಗಿದೆ ʼ ಎಂದು ಸಮರ್ಥಿಸಿಕೊಂಡಿದ್ದಾರೆ. “ಮಾರುಕಟ್ಟೆ ಚಲನೆಯು ತಾತ್ಕಾಲಿಕವಾಗಿದ್ದು ಅದಾನಿ ಎಂಟರ್‌ಪ್ರೈಸಸ್ ಮಧ್ಯಮ ಹತೋಟಿ ಮತ್ತು ವಿಸ್ತರಣೆ ಹಾಗು ಬೆಳವಣಿಗೆಗೆ ಅಗತ್ಯವಿರುವ ಉದ್ದೇಶಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸುತ್ತದೆ ಎಂದು ಹೇಳಿದ್ದಾರೆ.

ಜನವರಿ 24 ರಿಂದ ಹಿಂಡೆನ್‌ಬರ್ಗ್‌ ಆರೋಪಗಳಿಂದ ಅದಾನಿ ಸಮೂಹವು ತೀವ್ರ ನಷ್ಟ ಅನುಭಿಸಿದೆ. ಅದರ ಸಂಯೋಜಿತ ಮಾರುಕಟ್ಟೆ ಬಂಡವಾಳೀಕರಣವು 55 ಶೇಕಡಾಗಿಂತ ಕುಸಿತವಾಗಿದ್ದು 10 ಲಕ್ಷ ಕೋಟಿ ರೂ.ಗಿಂತ ಕೆಳಗೆ ತಲುಪಿದೆ. ಜನವರಿ 24ರವೇಳೆ 21.94 ಲಕ್ಷ ಕೋಟಿ ರೂ.ಗಳಷ್ಟಿದ್ದ ಅದಾನಿ ಸಮೂಹದ ಸಂಯೋಜಿತ ಮಾರುಕಟ್ಟೆ ಬಂಡವಾಳವು 9.89 ಲಕ್ಷ ಕೋಟಿ ರೂ,ಗೆ ಇಳಿದಿದೆ.

ವರ್ಷದಿಂದ ವರ್ಷಕ್ಕೆ 42 ಶೇಕಡಾ ಬೆಳವಣಿಗೆಯನ್ನು ಅದಾನಿ ಎಂಟರ್‌ಪ್ರೈಸಸ್ ದಾಖಲಿಸಿದ್ದು ಮೂರನೇ ತ್ರೈಮಾಸಿಕದಲ್ಲಿ 26,612 ಕೋಟಿ ರೂ. ಆದಾಯ ಹೊಂದಿದೆ. ಕಂಪನಿಯ ಹೊಸ ಶಕ್ತಿ ಕೇಂದ್ರಗಳು, ವಿಮಾನ ನಿಲ್ದಾಣಗಳು ಮತ್ತು ಸಂಯೋಜಿತ ಸಂಪನ್ಮೂಲ ನಿರ್ವಹಣಾ ವ್ಯವಹಾರಗಳು ಅದರ ಬೆಳವಣಿಗೆಗೆ ಸಹಾಯಕವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!