ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷಿತ ಚಿತ್ರ ರಾಧೆ ಶ್ಯಾಮ್ ಇದೇ ತಿಂಗಳು ೧೪ಕ್ಕೆ ರಿಲೀಸ್ ಆಗಲಿದೆ.ಆದರೆ ಕೊರೋನಾ ಕಾರಣದಿಂದ ಮುಂದೆ ಏನಾಗುತ್ತದೆ ಅನ್ನೋದು ಯಾರಿಗೂ ತಿಳಿದಿಲ್ಲ. ರಾಧೆ ಶ್ಯಾಮ್ ಚಿತ್ರತಂಡಕ್ಕೆ ಒಟಿಟಿ ಕಡೆಯಿಂದ ಬಿಗ್ ಆಫರ್ ಒಂದು ಬಂದಿದೆಯಂತೆ.
ದೊಡ್ಡ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್‌ನಿಂದ ಈ ಸಿನಿಮಾ ರೈಟ್ಸ್‌ಗಾಗಿ 300 ಕೋಟಿ ರೂ. ಆಫರ್ ಮಾಡಿವೆಯಂತೆ. ಇದಕ್ಕೆ ಚಿತ್ರತಂಡ ಒಪ್ಪದೇ ಇದೀಗ 350 ಕೋಟಿ ರೂ. ಕೂಡ ಆಫರ್ ಮಾಡಲಾಗಿದೆಯಂತೆ. ಆದರೆ ಈ ಆಫರ್‌ನ್ನು ಕೂಡ ಚಿತ್ರತಂಡ ರಿಜೆಕ್ಟ್ ಮಾಡಿದೆಯಂತೆ. ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗುವುದೇ ಚಂದ ಎಂದು ತಂಡ ಹೇಳಿದೆಯಂತೆ!