ಅತ್ಯುತ್ತಮ ಕನ್ನಡ ಚಿತ್ರ ಗೀತೆಗಳ ರಚನೆಕಾರ ಶ್ಯಾಮಸುಂದರ ಕುಲಕರ್ಣಿ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕನ್ನಡ ಹೊನ್ನುಡಿ ದೇವಿಯನು ಪೂಜಿಸುವೆ’, ‘ಯಾವ ಹೂವು ಯಾರ ಮುಡಿಗೋ’, ‘ಸೇವಂತಿಯೇ-ಸೇವಂತಿಯೇ’ ಸೇರಿದಂತೆ ಹಲವು ಕನ್ನಡ ಗೀತೆಗಳನ್ನು ರಚಿಸಿರುವ ಖ್ಯಾತ ಚಿತ್ರ ಸಾಹಿತಿ ಶ್ಯಾಮಸುಂದರ ಕುಲಕರ್ಣಿ ಅವರು ವಿಧಿವಶರಾಗಿದ್ದಾರೆ.

ಖ್ಯಾತ ಸಾಹಿತಿ ಶ್ಯಾಮಸುಂದರ ಕುಲಕರ್ಣಿ ಅವರು ಕನ್ನಡ ಚಿತ್ರಗಳಿಗೆ ಹಲವು ಶ್ರೇಷ್ಠ ಗೀತೆಗಳನ್ನು ಬರೆದಿರುವ ಇವರು ಅಕ್ಟೋಬರ್ 31 ರಂದು ನಿಧನರಾಗಿದ್ದಾರೆ. ಆದರೆ ತಡವಾಗಿ ಈ ಸುದ್ದಿ ಹೊರಬಿದ್ದಿದೆ.

ಅವರ ಸಾವು ಸುದ್ದಿಯಾಗದಂತೆ ನೋಡಿಕೊಳ್ಳಬೇಕು ಎಂಬುದು ಅವರು ಬಯಸಿದ್ದರು ಎಂದು ಕುಂಟುಬಸ್ಥರು ತಿಳಿಸಿದ್ದಾರೆ. ಇದರಿಂದಾಗಿ ಅವರ ಸಾವಿನ ಸುದ್ದಿ ಬಹಳ ತಡವಾಗಿ ಹೊರಬಿದ್ದಿದೆ.

ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯ ಅವರನ್ನು ಬಹಳವಾಗಿ ಕಾಡುತ್ತಿತ್ತು ಎನ್ನಲಾಗಿದೆ. ಅವರ ಅಗಲುವಿಕೆಯಿಂದ ಸಜ್ಜನಿಕೆಯ ಪರಂಪರೆಯ ಕೊನೆಯ ಕೊಂಡಿಗಳಲ್ಲೊಂದು ಕಳಚಿದಂತಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!