ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೋಗಿ ಆದಿತ್ಯನಾಥ್ ಅವರಿಗೆ ಖರ್ಗೆ ಸಾಹೇಬರ ಇತಿಹಾಸ ಗೊತ್ತಿಲ್ಲ. ಬೇರೆ ಬೇರೆ ಸಮುದಾಯದ ಕೆಲವರಿಂದ ಮೋಸ ಆಗುತ್ತೆ ಅಂತ ಇಡೀ ಸಮುದಾಯವನ್ನು ದೂರಲು ಆಗುತ್ತಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಮುಸ್ಲಿಂರಿಂದ ತಾಯಿ, ಸಹೋದರಿ ಸುಟ್ಟು ಹೋದರೂ ಮಲ್ಲಿಕಾರ್ಜುನ ಖರ್ಗೆ ಮೌನ ಎಂಬ ಯೋಗಿ ಆದಿತ್ಯನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸುಟ್ಟಿದ್ದು ರಜಾಕಾರರು. ಮುಸ್ಲಿಂ ಸಮುದಾಯ ಅಲ್ಲ ಎಂದು ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಬಿಜೆಪಿ ವಿರುದ್ಧ ಕಟುವಾಗಿ ಮಾತನಾಡಿರುವ ಅವರು, ಮೊದಲು ಬಿಜೆಪಿ ಸಿದ್ಧಾಂತಗಳಲ್ಲಿ ಸಮಾನತೆ ತರಲಿ. ಬಿಜೆಪಿಯವರು ಅಪಾಯದಲ್ಲಿದ್ರೆ ಮಾತ್ರ ಹಿಂದೂಗಳು ಅಪಾಯದಲ್ಲಿದ್ದಾರೆ ಅಂತ ಬಿಂಬಿಸುತ್ತಾರೆ. ನಿಜಕ್ಕೂ ಅಪಾಯದಲ್ಲಿ ಇರೋರು ಬಿಜೆಪಿಯವರು, ಹಿಂದೂಗಳಲ್ಲ. ತಾವು ಅಪಾಯದಲ್ಲಿ ಇದ್ದಾಗ ಹಿಂದೂಗಳ ಹೆಸರು ಬಳಸಿಕೊಳ್ತಾರೆ ಎಂದು ವಾಗ್ದಾಳಿ ನಡೆಸಿದರು.