ಉದ್ದೀಪನ ಮದ್ದು: ಕನ್ನಡತಿ ಅಥ್ಲೀಟ್ ಎಂ.ಆರ್. ಪೂವಮ್ಮಗೆ ಎರಡು ವರ್ಷ ನಿಷೇಧದ ಗುದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉದ್ದೀಪನ ಪದಾರ್ಥ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಏಷ್ಯನ್ ಗೇಮ್ಸ್ ಪದಕ ವಿಜೇತೆ, ಕರ್ನಾಟಕದ ಅಥ್ಲೀಟ್‌ ಎಂಆರ್ ಪೂವಮ್ಮ ಅವರಿಗೆ ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿ ಎರಡು ವರ್ಷ ನಿಷೇಧ ಘೋಷಿಸಿದೆ.

ಫೆಬ್ರವರಿ 18 ರಂದು ಪಟಿಯಾಲದಲ್ಲಿ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ನಡೆದಿತ್ತು. ಈ ವೇಳೆ ಪೂವಮ್ಮ ಅವರ ಡೋಪ್ ಮಾದರಿ ಸಂಗ್ರಹಿಸಲಾಗಿತ್ತು. ಅದರಲ್ಲಿ ಅವರು ಮೀಥೈಲ್‌ ಹೆಕ್ಸಾನಿಯಮೈನ್‌ ತೆಗೆದುಕೊಂಡಿದ್ದು ದೃಢಪಟ್ಟಿತ್ತು. ಇದೇ ಕಾರಣಕ್ಕೆ ಅವರನ್ನು ಮೂರು ತಿಂಗಳ ಅಮಾನತುಗೊಳಿಸಲಾಗಿತ್ತು.

ಬಳಿಕ‌ ಶಿಸ್ತಿನ ಸಮಿತಿಯ ನಿರ್ಧಾರದ ವಿರುದ್ಧ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿ (ನಾಡಾ) ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ಮೇಲ್ಮನವಿ ಅಂಗೀಕರಿಸಿದ ಬಳಿಕ ಪೂವಮ್ಮ ಅವರಿಗೆ ಎರಡು ವರ್ಷಗಳ ನಿಷೇಧ ವಿಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!