ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಗರಣಗಳನ್ನು ಮುಚ್ಚಿಹಾಕೋದಕ್ಕೆ ಇಡೀ ಲೋಕಾಯುಕ್ತ ಸಂಸ್ಥೆಯನ್ನೇ ಸಿದ್ದರಾಮಯ್ಯ ಮುಚ್ಚಿಹಾಕಿದ್ರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಲಂಚ ಸ್ವೀಕಾರ ಹಿನ್ನೆಲೆ ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಮಾತನಾಡಿದ್ದು, ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ಸಚಿವರೊಬ್ಬರ ಕಚೇರಿಯಲ್ಲಿ ಎರಡು ಲಕ್ಷ ರೂಪಾಯಿ ನಗದು ಸಿಕ್ಕಿತ್ತು. ಇದು ಅವರಿಗೆ ನೆನಪಿಲ್ವಾ? ಆಗ ಇವರು ರಾಜೀನಾಮೆ ಕೊಟ್ಟಿದ್ರಾ? ಲೋಕಾಯುಕ್ತ ಇದ್ದಿದ್ದರೆ ಇವರೆಲ್ಲ ಅರೆಸ್ಟ್ ಆಗಬೇಕಿತ್ತು. ಇಂಥ ಹಗರಣಗಳನ್ನು ಮುಚ್ಚಿಹಾಕೋದಕ್ಕೆ ಸಂಸ್ಥೆಯೇ ಬೇಡ ಅಂದಿದ್ದರು ಎಂದು ಹೇಳಿದ್ದಾರೆ.
ನನ್ನ ಮೇಲೆ ಸಾಕಷ್ಟು ಆರೋಪ ಮಾಡಬಹುದು, ಆದರೆ ಇದರಿಂದ ನಿಮ್ಮ ಪಾಪ ಕಳೆಯೋದಿಲ್ಲ. ಲೋಕಾಯುಕ್ತಕ್ಕೆ ಪಕ್ಷ ಬೇಧ ಇಲ್ಲ. ತಪ್ಪು ಯಾರೇ ಮಾಡಿದ್ರೂ ಶಿಕ್ಷೆ ಇದ್ದದ್ದೆ ಎಂದಿದ್ದಾರೆ.