Tuesday, March 28, 2023

Latest Posts

ಬಿಜೆಪಿ ಸಂಸದ ತೇಜಸ್ವಿ ಸೂಯ೯ರನ್ನು ಅಮವಾಸ್ಯೆಗೆ ಹೋಲಿಸಿದ ಸಿದ್ದರಾಮಯ್ಯ

ಹೊಸದಿಗಂತ ವರದಿ ಕಲಬುರಗಿ :

ಬಿಜೆಪಿ ಸಂಸದ ತೇಜಸ್ವಿ, ಅವನು ಅಮವಾಸ್ಯೆ, ಅದಕ್ಕೆ ನಾನು ಅಮವಾಸ್ಯೆ ಅಂತ ಕರೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡುವ ಮೂಲಕ ಸಂಸದ ತೇಜಸ್ವಿ ಸೂಯ೯ ಅವರನ್ನು ಅಮವಾಸ್ಯೆ ಗೆ ಹೋಲಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತಾಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ನಷ್ಟ ಆಗುತ್ತದೆ ಎಂಬ ಹೇಳಿಕೆ ನೀಡಿದ್ದು,ಈ ಮಾತನ್ನು ಯಾರು ಸಹ ಖಂಡಿಸಿಲ್ಲ ಎಂದು ಹೇಳಿದರು.

ಕಾಪೋ೯ರೇಟ್ ವಲಯದ 14 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ಬಿಜೆಪಿ ಪಕ್ಷದವರಿಗೆ ರೈತರ ಸಾಲ ಮನ್ನಾ ಮಾಡಲು ಆಗುತ್ತಿಲ್ಲ ಎಂದು ತೇಜಸ್ವಿ ವಿರುದ್ಧ ವಾಗ್ದಾಳಿ ನಡೆಸಿದರು.

ಓವ೯ ಸಂಸದನಾಗಿ ಇಂತಹ ಹೇಳಿಕೆ ನೀಡುತ್ತಾನೆ ಎಂದರೆ ಇದು ಬಿಜೆಪಿಯ ಆಂತರಿಕ ಚಿಂತನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!