Saturday, April 1, 2023

Latest Posts

ಜನಪರ ಕಾಳಜಿ ಇಲ್ಲದವ ಉತ್ತಮ ಸಂಸದೀಯ ಪಟು ಆಗೋದಿಲ್ಲ: ಸಿದ್ದರಾಮಯ್ಯ

ಕಲಬುರಗಿ:

ಜನಪರವಾದ ಕಾಳಜಿ,ಸ್ಪಂಧಿಸುವ ಗುಣಗಳು ಇಲ್ಲದವರು ಒಬ್ಬ ಉತ್ತಮ ಸಂಸದೀಯ ಪಟುವಾಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಚಿತಾಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖಗೆ೯ ಅತ್ಯಂತ ಕ್ರಿಯಾಶೀಲ, ವಿಚಾರಶೀಲ ರಾಜಕಾರಣಿಯಾಗಿದ್ದು,ಪ್ರಾಮಾಣಿಕ ಹಾಗೂ ನಿಷ್ಟುರತೆಯಿಂದ ಕೆಲವೇ ಸಚಿವರಲ್ಲಿ ಪ್ರಿಯಾಂಕ್ ಖಗೆ೯ ಒಬ್ಬರು ಎಂದರು.

ರಾಜಕೀಯದಲ್ಲಿ ನಿಷ್ಟುರತೆ,ಪ್ರಾಮಾಣಿಕತೆ ಬಹಳ ತೊಂದರೆಯಾಗುತ್ತದೆ.ಮಲ್ಲಿಕಾರ್ಜುನ ಖರ್ಗೆ ಅವರ ಸ್ವಭಾವವನ್ನು ಪುತ್ರ ಪ್ರಿಯಾಂಕ್ ಖಗೆ೯ ಬೆಳೆಸಿಕೊಂಡಿದ್ದಾರೆ ಎಂದರು.

ನಾನು ಸಿಎಂ ಇದ್ದಾಗ ಚಿತಾಪುರ ಕ್ಷೇತ್ರದ ಅಭಿವೃದ್ಧಿ ಸಲುವಾಗಿ 3500 ಕೋಟಿ ಅನುದಾನ ವನ್ನು ತಂದಿದ್ದಾರೆ. ಇಂತಹ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭೆಗೆ ಬಂದರೆ,ರಾಜ್ಯದ ಅಭಿವೃದ್ಧಿ ವೇಗವಾಗುತ್ತದೆ.ಮುಂದಿನ ದಿನಗಳಲ್ಲಿ ಪ್ರಿಯಾಂಕ್ ಖಗೆ೯ಗೆ ಒಳ್ಳೆಯ ರಾಜಕೀಯ ಭವಿಷ್ಯವಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!