ಹೊಸದಿಗಂತ ವರದಿ ವಿಜಯಪುರ:
ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ. ನಾವು ಮಾತ್ರ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೊತೆಗೆ ಜೋಳ, ರಾಗಿ ಕೊಡ್ತಿದ್ದೇವೆ. ಇನ್ನು
ಸಿದ್ದರಾಮಯ್ಯ ರಾಜಕೀಯವಾಗಿ ತನಗೆ ಏನು ಬೇಕು ಅದನ್ನ ಹೇಳುತ್ತಿದ್ದಾನೆ. ಅದಕ್ಕಾಗಿ ಜನತೆ ಅದನ್ನು ನಂಬಬಾರದು ಎಂದರು.
ನಾನು ಮುಖ್ಯಮಂತ್ರಿಯಾದ್ರೆ ಹತ್ತು ಕೆಜಿ ಅಕ್ಕಿ ಕೊಡ್ತೀನಿ ಎಂದು ಹಿಂಗ್ ಹಿಂಗ್ ಹೊರಳಾಡುತ್ತಾನೆ ಎಂದು ಸಚಿವ ಉಮೇಶ ಕತ್ತಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಟೈಲ್ ಮಾಡಿ ತೋರಿಸಿ ವ್ಯಂಗ್ಯ ಮಾಡಿದರು. ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಮುರುಘಾ ಶ್ರೀ ವಿಚಾರ:
ಪೋಕ್ಸೊ ಕಾಯ್ದೆಯಡಿ ಮಕ್ಕಳನ್ನು ಕರೆದು ನ್ಯಾಯಾಧೀಶರು ವಿಚಾರಣೆ ಮಾಡುತ್ತಿದ್ದಾರೆ. ಮುರುಘಾ ಶ್ರೀ ಬಂಧನ ಮಾಡೋದು ಬಿಡೋದು ಕೋರ್ಟ್ ತೀರ್ಪು ಪ್ರಕಾರ ನಡೆದುಕೊಳ್ಳುತ್ತಾರೆ ಎಂದರು.
ಇನ್ನು ಹೊರ ರಾಜ್ಯದಿಂದ ತನಿಖೆ ನಡೆಯಿಸಿ ಎಂದು ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಪತ್ರ ಬರೆದ ವಿಚಾರಕ್ಕೆ ಉತ್ತರ ನೀಡಿದ ಅವರು, ಯಾರು ತನಿಖೆ ನಡೆಸಿದರೆ ಏನು ತೊಂದರೆ ಆಗಲ್ಲ. ಪ್ರಾಥಮಿಕವಾಗಿ ರಾಜ್ಯದ ಪೊಲೀಸರು ತನಿಖೆ ಮಾಡ್ಬೇಕು. ಜಡ್ಜ್ ಗಳು ಅದರ ಬಗ್ಗೆ ವಿಚಾರಣೆ ಮಾಡ್ಬೇಕು. ತೀರ್ಮಾನ ಮಾಡಿದ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.