ಸಿದ್ದರಾಮಯ್ಯರಿಗೆ ಪಕ್ಷದ ಕಾರ್ಯಕರ್ತರೇ ಸೋಲಿಸುವ ಭಯ ಕಾಡುತ್ತಿದೆ: ಸಚಿವ ಆರಗ ಜ್ಞಾನೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿದ್ದರಾಮಯ್ಯ ಎಲ್ಲೂ ನಿಲ್ಲಬಹುದು, ಪ್ರಜಾಪ್ರಭುತ್ವ ಆದರೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಿಗೆ ಸ್ಥಳವೇ ಇಲ್ಲದಾಗಿದೆ. ಕ್ಷೇತ್ರವನ್ನು ಹುಡುಕಾಟ ನಡೆಸಿ, ಸ್ಪರ್ಧೆ ಮಾಡುವುದಕ್ಕೆ ಭಯಪಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟಾಂಗ್ ನೀಡಿದ್ದಾರೆ.

ಶುಕ್ರವಾರ ಉಡುಪಿ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅವರಪರಿಸ್ಥಿತಿ ಶೋಚನೀಯವಾಗಿದೆ. ಹೀಗಾಗಿ ಅವರು ಓಡಾಡುತ್ತಿದ್ದಾರೆ. ಕಳೆದ ಬಾರಿಯೂ ಹಾಗೆ ಮಾಡಿದ್ದರು ಅವರಿಗೆ ಜನರ ಮೇಲೆ ನಂಬಿಕೆ ಇಲ್ಲ, ಕಾರ್ಯಕರ್ತರ ಮೇಲೆ ನಂಬಿಕೆ ಇಲ್ಲ, ಹಿಂದಿನ ಸಲ ಬೇರೆ ಬೇರೆ ಸ್ಪರ್ಧೆ ಮಾಡಿದಾಗ ಸೋಲಿಸಿದ್ದಾರೆ. ಅವರ ಪಕ್ಷದ ಕಾರ್ಯಕರ್ತರೇ ಸೋಲಿಸುತ್ತಾರೆ, ಎನ್ನುವ ಭಯ ಕಾಡುತ್ತಿದೆ, ಎರಡು ಕಡೆ ಸ್ಪರ್ಧೆ ಅಂದ್ರೆ, ಒಂದು ಕಡೆ ಸೋಲುತ್ತೇನೆ ಅಂತ ಭಯ. ಭರವಸೆ ಇಲ್ಲದಾಗ ಎರಡು ಕಡೆ ನಿಂತು ಒಂದು ಗೆಲ್ಲುತ್ತೇನೆ ಎನ್ನುವ ನಂಬಿಕೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!