ಸಿದ್ದರಾಮಯ್ಯಗೆ ಕಾಂಗ್ರೆಸ್ ತತ್ವಸಿದ್ದಾಂತ ಪಾಲಿಸಲು ಸಾಧ್ಯವಾಗುತ್ತಿಲ್ಲ: ಸಚಿವ ಕಾರಜೋಳ ವ್ಯಂಗ್ಯ

ಹೊಸದಿಗಂತ ವರದಿ, ಬಾಗಲಕೋಟೆ
ಜನತಾ ಪರಿವಾರದಿಂದ ರಾಜಕಾರಣಕ್ಕೆ ಬಂದ ಸಿದ್ದರಾಮಯ್ಯ ಕಾಂಗ್ರೆಸ್ ವಿರೋಧಿಯಾಗಿ ರಾಜಕಾರಣ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ ಎಂದು ಸಚಿವ ಗೋವಿಂದ್ ಕಾರಜೋಳ ವ್ಯಂಗ್ಯವಾಡಿದ್ದಾರೆ.
ಹುನಗುಂದ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತಾಯಪೂರ್ವಕವಾಗಿ ಕಾಂಗ್ರೆಸ್ ಬಗ್ಗೆ ಮಾತನಾಡುತ್ತೀರಿ. ಇನ್ಮುಂದೆ ಕಾಂಗ್ರೆಸ್ ಉಳಿಯಲು ಸಾಧ್ಯವಿಲ್ಲ. ಗುಜರಾತ್ ನಲ್ಲಿರುವ ಧಯನೀಯ ಸ್ಥಿತಿ ಕರ್ನಾಟಕ ರಾಜ್ಯದಲ್ಲೂ ಅದೇ ಪರಿಸ್ಥಿತಿ ಆಗುತ್ತೇ ಎಂದು ಎಚ್ಚರಿಕೆ ನೀಡಿದರು.
ಸಾಮಾನ್ಯವಾಗಿ ಹಿಮಾಚಲ ಪ್ರದೇಶದಲ್ಲಿ ಒಂದು ಟ್ರೆಡಿಶನ್, ಕಲ್ಚರ್ ಇದ್ದು ಒಂದು ಸಾರಿ ಆಯ್ಕೆ ಮಾಡಿದವರನ್ನ ಮತ್ತೊಮ್ಮೆ ಆಯ್ಕೆ ಮಾಡೋದಿಲ್ಲ ಕಾಂಗ್ರೆಸ್ ಗುಜರಾತ್ ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಹಿಂದೆ 77 ಇದ್ದದ್ದು ಈಗ 16ಕ್ಕೆ ಇಳಿದಿದೆ. ಬಿಜೆಪಿಗೆ ಅಂತಹ ದಯನೀಯ ಸ್ಥಿತಿಗೆ ಬಂದಿಲ್ಲ ಎಂದರು.ಮುಂಬರುವ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಯಲ್ಲಿ ಯುವಕರಿಗೆ ಮಣೆ ಹಾಕುವ ವಿಚಾರ‌‌‌ಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು.ನಮ್ಮ ಪಕ್ಷದ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬದಲಾವಣೆ ಮಾಡುವಂತಹ ಅನಿವಾರ್ಯತೆ ಬಂದರೆ, ಬದಲಾವಣೆ ಮಾಡ್ತಾರೆ. ಹಿರಿಯರನ್ನ ಕೈ ಬಿಡ್ತಾರೆ ಅನ್ನೋದೆಲ್ಲ ಗಾಳಿ ಸುದ್ದಿ. ಅಂತಹ ಯಾವುದೇ ಪ್ರಕ್ರಿಯೆ ನಮ್ಮಲ್ಲಿ ನಡೆದಿಲ್ಲ ಎಂದು ಅವರು ಹೇಳಿದರು.
ದೇಶದ ಇತಿಹಾದಲ್ಲಿಯೇ ಗುಜರಾತ್ ಚುನಾವಣೆಯು ಐತಿಹಾಸಿಕ ಚುನಾವಣೆಯಾಗಿದೆ.120 ವರ್ಷಗಳ ಹಳೆಯ ಪಕ್ಷ ಕಾಂಗ್ರೆಸ್ ಗುಜರಾತನಲ್ಲಿ ಕೇವಲ 16 ಸ್ಥಾನ ಗೆಲ್ಲೋ ಮೂಲಕ ಪ್ರತಿಪಕ್ಷದ ಸ್ಥಾನವೂ ಕೂಡಾ ಅವರಿಗೆ ಸಿಕ್ಕಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ ಅಂತ ಮೋದಿ 10 ವರ್ಷಗಳ ಹಿಂದೇನೆ ಹೇಳಿದ್ರು ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ ಎಂದರು.
ಖಂಡಿತವಾಗಿಯೂ ಆಗುತ್ತದೆ, ದೇಶದಲ್ಲಿ ಮೋದಿ ಆಡಳಿತಕ್ಕೆ ಮೆಚ್ಚಿದ್ದಾರೆ. ದೇಶ ಸುರಕ್ಷತೆ ಆಗಿರಬೇಕು ಅಂದ್ರೆ ಮೋದಿ ಆಡಳಿತವೇ ಇರಬೇಕು ಅನ್ನೋ ಜನರ ಬಯಕೆ ಆಗಿದೆ. ಇಡೀ ಪ್ರಪಂಚದ ಎಲ್ಲರೂ ಮೋದಿ ಅವರೇ ವಿಶ್ವದ ನಾಯಕರಾಗುವಂತೆ ಬಯಸುತ್ತಿದ್ದಾರೆ.ದೇಶದಲ್ಲಿ ಅಷ್ಟೇ ಅಲ್ಲ, ವಿಶ್ವದಲ್ಲಿ ಭಾರತದ ಕೀರ್ತಿ, ಗೌರವವನ್ನು ಹೆಚ್ಚಿಸುವ ಕೆಲಸ ಮೋದಿ ಆಡಳಿತದಲ್ಲಿ ಆಗಿದೆ ಎಂದರು.
ಆಪರೇಷನ್ ಕಮಲ ಹಿಮಾಚಲ ಎಲೆಕ್ಷನ್‌ನಲ್ಲಿ ಎಫೆಕ್ಟ್ ಆಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜನರು ಬಯಸಿ ಪಕ್ಷಕ್ಕೆ ಬರ್ತಿದಾರೆ, ದೇಶದ ಸುರಕ್ಷತೆ, ಅಭಿವೃದ್ಧಿಗೆ ಒಂದೇ ಪಕ್ಷ ಅದು ಬಿಜೆಪಿ. ಅದಕ್ಕಾಗಿ ಬಿಜೆಪಿ ಸೇರಲು ಕ್ಯೂನಲ್ಲಿ ಇದಾರೆ.ಕಾಂಗ್ರೆಸ್ ನಾಯಕರು, ಗುಲಾಮ್ ನಬಿ ಆಜಾದನಂತವರು ರಾಜೀನಾಮೆ ನೀಡಿ ಹೊರಗೆ ಹೋದ್ರು, ಆಜಾದ ಅಂತ ಶ್ರೇಷ್ಠ ವ್ಯಕ್ತಿ ಕಾಂಗ್ರೆಸ್ ನಲ್ಲಿ ಇರಲಿಲ್ಲ, ಅಂತವ್ರು ಪಕ್ಷ ಬಿಟ್ಟೋದ್ರು, ಕಾಂಗ್ರೆಸ್ ಈಗ ವಿಶ್ವಾಸ ಕಳೆದುಕೊಂಡಂತಹ ಪಕ್ಷ ಎಂದ ಕಾರಜೋಳ ಕಟುಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!