ದಿಗಂತ ವರದಿ ವಿಜಯಪುರ:
ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ದಸರಾ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂದು ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷದ ವಿಚಾರ ಹೇಳೋಕೆ ವಿಜಯೇಂದ್ರ ಯಾರು ? ವಿಜಯೇಂದ್ರ ಕಾಂಗ್ರೆಸ್ ಹೈಕಮಾಂಡಾ ? ಎಂದರು.
ಬಿಜೆಪಿ ಪಕ್ಷದ ಅಧ್ಯಕ್ಷರು, ಅವರು ಹೇಳಿದಾಗ ರಾಜೀನಾಮೆ ನೀಡೋಕೆ ಆಗತ್ತಾ ? ಎಂದರು.
ನಮ್ಮ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಮ್ಮ ಹೈಕಮಾಂಡ್ ಸಿದ್ದರಾಮಯ್ಯ ಜೊತೆಗೆ ಇದ್ದೇವೆ ಎಂದು ಹೇಳಿದ್ದಾರೆ. ರಾಜೀನಾಮೆ ಅಗತ್ಯ ಇಲ್ಲ ಎಂದಿದ್ದಾರೆ, ಯಾರು ಈ ವಿಜಯೇಂದ್ರಾ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಹೈಕಮಾಂಡ್ ಹೇಳಬೇಕು, ಇವ್ರು ಯಾರು ಹೇಳೋಕೆ, ರಾಜೀನಾಮೆ ಇಲ್ಲ ಎಂದು ವೇಣುಗೋಪಾಲ, ಸುರ್ಜೆವಾಲಾ ಬೆಂಗಳೂರಲ್ಲಿ ಸುದ್ದಿಗೋಷ್ಠಿ ಮಾಡಿ ಹೇಳಿದ್ದಾರೆ. ಹೈಕಮಾಂಡ್ ನಿಮ್ಮ ಜೊತೆ ಇದೆ ಎಂದು ಬೆಂಗಳೂರಿಗೆ ಬಂದು ಹೇಳಿದ್ದಾರೆ ಎಂದರು.
ಕಾರ್ಯಕ್ರಮವೊಂದರಲ್ಲಿ ಸತೀಶ್ ಜಾರಕಿಹೊಳಿ ಸಿಎಂ ಘೋಷಣೆ ವಿಚಾರಕ್ಕೆ, ಜನಾ ಕೂಗ್ತಾರೆ, ಅಭಿಮಾನಿಗಳು ಕೂಗಿದ ತಕ್ಷಣ ಸಿಎಂ ಆಗಿ ಬಿಡ್ತಾರಾ?, ನನ್ನ ಅಭಿಮಾನಿಗಳು ಕೂಗ್ತಾರೆ, ನಾನು ಸಿಎಂ ಆಗ್ತೇನಾ ? ಎಂದು ಪ್ರಶ್ನಿಸಿದರು.
ವಿಜಯೇಂದ್ರ ಸತೀಶ ಜಾರಕಿಹೊಳಿ ಭೇಟಿ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನೀವ್ ಹೇಳಿದ್ದಿರಿ, ನಾನು ಕೇಳ್ತಿದ್ದೀನಿ, ಮಾಹಿತಿ ತೆಗೆದುಕೊಂಡು ಹೇಳುವೆ ಎಂದರು.