ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮೂಹಿಕ ವಿವಾಹವಾದರೆ ಸರ್ಕಾರದಿಂದ ಹಣ ಸಿಗುತ್ತೆ ಎಂದು ಅಣ್ಣ, ತಂಗಿಯೇ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶ ಹತ್ರಾಸ್ನಲ್ಲಿ ನಡೆದಿದೆ. ಉತ್ತರ ಪ್ರದೇಶ ಸರ್ಕಾರದ ಯೋಜನೆಯಡಿಯಲ್ಲಿ ನವವಿವಾಹಿತರಿಗೆ ಸರ್ಕಾರದಿಂದ 35,000 ರೂ. ನೀಡಲಾಗುತ್ತದೆ. ಆ ಹಣವನ್ನು ಪಡೆಯಲು ಅಣ್ಣ-ತಂಗಿಯೇ ಮದುವೆಯಾಗಿದ್ದಾರೆ.
ಹಣಕಾಸಿನ ನೆರವು ಪಡೆಯಲು ಕೆಲವರು ಮರು ಮದುವೆಯಾದರೆ ಇನ್ನೂ ಕೆಲವರು ಸಹೋದರ, ಸಹೋದರಿಯರೇ ಮದುವೆಯಾಗಿದ್ದಾರೆ. ವಿವಾಹಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ ಕಡಿಮೆ-ಆದಾಯದ ಕುಟುಂಬಗಳನ್ನು ಬೆಂಬಲಿಸಲು ಈ ಯೋಜನೆ ರೂಪಿಸಲಾಗಿದೆ.
ಆದರೆ ಸಾಮೂಹಿಕ ವಿವಾಹ ಮೋಸದ ವಿವಾಹವಾಗಿತ್ತು, 10,000 ರೂ ಮೌಲ್ಯದ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತದೆ ಮತ್ತು ಮದುವೆಯ ವೆಚ್ಚಕ್ಕಾಗಿ ರೂ 6,000 ನಿಗದಿಪಡಿಸಲಾಗಿದೆ. ಈಗಾಗಲೇ-ವಿವಾಹಿತ ದಂಪತಿಗಳು ಮರುಮದುವೆಯಾಗುವ ಮೂಲಕ ಯೋಜನೆಯ ಲಾಭವನ್ನು ಪಡೆದಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.