Thursday, June 1, 2023

Latest Posts

ಚುನಾವನಾ ಪ್ರಚಾರದಲ್ಲಿ ಸಿದ್ದರಾಮಯ್ಯನ ಮೊಮ್ಮಗ: ನಿಮ್ಮಲ್ಲಿ ಭಯ ಶುರುವಾಗಿದೆ ಎಂದ ಪ್ರತಾಪ್ ಸಿಂಹ

ಹೊಸದಿಗಂತ ವರದಿ, ಮೈಸೂರು:

ವರುಣಾದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಒಂದು ಲಕ್ಷ ಮತಗಳ ಅಂತರದಿoದ ಗೆಲುವು ಸಾಧಿಸುವುದಾಗಿ ಹೇಳುತ್ತಿರುವ ಮಾಜಿ ಮುಖ್ಯಮಂತ್ರಿಯಾದ ವಿಪಕ್ಷ ನಾಯಕ ಮೊಮ್ಮಗನಿಗೆ ಇನ್ನೂ ಸಹ ಮತದಾನದ ಹಕ್ಕೇ ಬಂದಿಲ್ಲ. ೧೭ ವರ್ಷದ ಮೊಮ್ಮಗನನ್ನು ಕರೆದುಕೊಂಡು ಹೋಗಿ ಪೂಜೆ ಮಾಡಿ ಭಾವನಾತ್ಮಕವಾಗಿ ಜನರ ಬಳಿ ಮತ ಕೇಳು ಹೊರಟಿದ್ದೀರಿ. ನಿಮ್ಮೊಳಗೆ ಪುಕ್ಕಲುತ, ಭಯ ಎಷ್ಟು ಕಾಡುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ? ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದರು.

ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಲಕ್ಷ ಮತಗಳ ಅಂತರದಿoದ ಗೆಲ್ಲುವ ವಿಶ್ವಾಸ, ಹುಮ್ಮಸು ಇರುವ ಸಿದ್ದರಾಮಯ್ಯ ಅವರು, ೧೭
ವರ್ಷದ ಒಳಗಿನವರು ಚುನಾವಣೆಯ ಪ್ರಕ್ರಿಯೆಯಲ್ಲೇ ಭಾಗವಹಿಸಬಾರದು ಎಂದು ಆದೇಶವಿದ್ದರೂ ತಮ್ಮ ಮೊಮ್ಮಗನನ್ನು ಚುನಾವನಾ ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಕಾನೂನು ಪಂಡಿತರಾದ ಸಿದ್ದರಾಮಯ್ಯನವರಿಗೆ ತಾವು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ಇನ್ನೂ ಮತದಾನದ ಹಕ್ಕೇ ಬಂದಿಲ್ಲ, ನನ್ನ ಉತ್ತರಾಧಿಕಾರಿ ಎಂಬ ಸಂದೇಶ ಕೊಡುತ್ತಿದ್ದಿರಿ. ಕಾಂಗ್ರೆಸ್‌ಗೆ ಹೋದ ಕೂಡಲೇ ನಿಮ್ಮೊಳಗಿದ್ದ ನೈತಿಕತೆ, ತತ್ವ ಸಿದ್ಧಾಂತಗಳು ಸತ್ತು ಹೋದವೆ. ನಿಮ್ಮ ಮಗನನ್ನು ಕಳೆದ ಬಾರಿ ಚುನಾವಣೆಗೆ ನಿಲ್ಲಿಸಿದ್ದಿರಿ. ಈಗ ನೀವೇ ಬಂದಿದ್ದಿರಿ. ನಾವು ಕಂಡoತ ಸಿದ್ದರಾಮಯ್ಯ ಜನರಿಗೆ ಬೋಧನೆ ಮಾಡುತ್ತಿದ್ದ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಹೋದ ಕೂಡಲೇ ಎಲ್ಲವನ್ನೂ ಅಡವಿಟ್ಟುಬಿಟ್ಟರೆ. ಈಗ ಭಾವನಾತ್ಮಕವಾಗಿ ನೀವು ಮಾತನಾಡುತ್ತಿದ್ದೀರಿ ಎಂದರೆ ನಿಮ್ಮಲ್ಲಿ ಭಯ ಶುರುವಾಗಿದೆ ಎಂದು ಟೀಕಿಸಿದರು.

ನಿಮಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಿಮ್ಮ ಮೊಮ್ಮಗನನ್ನ ಉತ್ತರಾಧಿಕಾರಿ ಅಂತ ಸಂದೇಶ ನೀಡ್ತಾ ಇದ್ದೀರಾ. ಕಾಂಗ್ರೆಸ್ ಗೆ ಹೋದ ಮೇಲೆ ನಿಮ್ಮಲ್ಲಿರುವ ನೈತಿಕತೆ ಸಿದ್ದಾಂತ ಸತ್ತೊಯ್ತಾ, ನಾವು ಕಂಡ ಸಿದ್ದರಾಮಯ್ಯ ಜನರಿಗೆ ವೇದ ಬೋಧನೆ ಮಾಡ್ತಾ ಇದ್ದವರು. ಆ ಸಿದ್ದರಾಮಯ್ಯ ಎಲ್ಲಿ ಹೋದ್ರು ಹಾಗಿದ್ರೆ. ಕಾಂಗ್ರೆಸ್ ಗೆ ಹೋದ ಬಳಿಕ ನಿಮ್ಮ ಸಿದ್ದಾಂತ, ನೈತಿಕತೆಯನ್ನ ಕಾಂಗ್ರೆಸ್ ಗೆ ಅಡವಿಟ್ಟರಾ ಎಂದು ಪ್ರಶ್ನಿಸಿದರು.
ಅಲ್ಲದೇ ಮೊಮ್ಮಗ, ಸೊಸೆ ಕರ್ಕೊಂಡ ಹೋಗಿ ಇಂದು ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಲು ಹೋಗಿದ್ದಿರಿ. ಆ ಮೂಲಕ ಭಾವನಾತ್ಮಕವಾಗಿ ಮತದಾರರ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದ್ದೀರಿ. ನೀವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಗೆ ಅವಮಾನ ಆಗಿದ್ದಾಗ ಎಲ್ಲಿ ಹೋಗಿತ್ತು, ನೀವೆ ಎಲ್ಲಾ ದಾರಿ ಮಾಡಿಕೊಟ್ಟಾಗ ದೇವರು ನೆನಪಿಗೆ ಬರಲಿಲ್ಲವೆ. ಇವತ್ತು ಮಕ್ಕಳು, ಮರಿಮಕ್ಕಳನ್ನು ಕರೆದೊಯ್ಯುವಾಗ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ನಿಮಗೆ ಎಂದು ವಾಗ್ದಾಳಿ ನಡೆಸಿದರು.
ಮೊಮ್ಮಗನನ್ನ ಕರೆದುಕೊಂಡು ಹೋಗಿ ಮತ ಕೇಳೋದನ್ನ ನೋಡಿದ್ರೆ ನಿಶ್ಚಿತ. ನೀವು ಸಿಎಂ ಆದಾಗಲೇ ಒಂದು ಲಕ್ಷ ಮತದಲ್ಲಿ ವರುಣಾದಲ್ಲಿ ಗೆಲ್ಲೋಕೆ ಆಗಲಿಲ್ಲ. ಆಗ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ರಿ.
ಮುಖ್ಯಮಂತ್ರಿ ಆಗಿದ್ದಾಗಲೇ ಪ್ರಬಲ ಅಭ್ಯರ್ಥಿಗಳಿಲ್ಲದೆ ಡಮ್ಮಿ ಅಭ್ಯರ್ಥಿಗಳನ್ನು ಹಾಕಿಸಿಕೊಳ್ಳುವ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಾಗಲೇ ಲಕ್ಷ ಮತಗಳ ಅಂತರದಿAದ ಗೆಲ್ಲಲ್ಲು ಸಾಧ್ಯವಾಗಿಲ್ಲ. ಇಷ್ಟು ಪುಕ್ಕಲುತನದ ಪ್ರಚಾರದಲ್ಲಿರುವ ನೀವೂ ರಾಜ್ಯದ ಇತಿಹಾಸದಲ್ಲಿ ಯಾರು ಲಕ್ಷ ಮತಗಳ ಅಂತರದಿAದ ಗೆದ್ದಿದ್ದಾರೆ ಹೇಳಲಿ. ಮುಖ್ಯಮಂತ್ರಿಯಾಗಿದ್ದಾಗಲೇ ೩೬ಸಾವಿರ ಮತಗಳಿದ್ದ ಸೋತಿದ್ದೀರಿ. ಸೋಲಿನ ಭಯದಿಂದ ಇಂತಹ ಮಾತುಗಳನ್ನು ಆಡುತ್ತಿದ್ದೀರಿ. ನಾವು ಪ್ರಬಲ ಅಭ್ಯರ್ಥಿ ಹಾಕುತ್ತಿದ್ದಾಗೇ ಮೊಮ್ಮಗ, ಕುಟುಂಬ ಹಾದಿಯಾಗಿ ಪ್ರಚಾರಕ್ಕೆ ಇಳಿಯುತ್ತಿದ್ದಿರಿ. ಕರ್ನಾಟಕ ಇತಿಹಾಸದಲ್ಲಿ ಯಾರಾದ್ರು ಒಂದು ಲಕ್ಷ ಮತದಲ್ಲಿ ಗೆದ್ದಿದ್ದರೆ ಹೇಳಿ. ಮುಖ್ಯಮಂತ್ರಿ ಆಗಿದ್ದಾಗಲೇ ಚಾಮುಂಡೇಶ್ವರಿ ೩೬ ಸಾವಿರ ಅಂತರದಿAದ ಸೋತಿದ್ದೀರಿ. ಮೇ ೧೩ ಕ್ಕೆ ಚಾಮುಂಡೇಶ್ವರಿ ತಾಯಿ ತೀರ್ಪು ಕೊಡ್ತಾಳೆ. ಅಲ್ಲಿ ತನಕ ಆದರೂ ಬಡಾಯಿಕೊಚ್ಚಿಕೊಳ್ಳದೇ ಇರಿ ಎಂದು ಹೇಳಿದರು.
೨೦೧೩ರಲ್ಲಿ ಯಾವ ರೀತಿ ಜಿ.ಪರಮೇಶ್ವರ್, ೨೦೧೯ರಲ್ಲಿ ಮುನಿಯಪ್ಪ ಅವರನ್ನು ಸೋಲಿಸಿದರೂ ಎಂದು ದಲಿತರ ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ಮನವರಿಕೆ ಆದ ಬಳಿಕ ನಾವು ವರುಣ ಕ್ಷೇತ್ರಕ್ಕೆ ಹೋದ ಬಳಿಕ ಬಹಳ ದೊಡ್ಡ ಅಂತರದಿAದ ಗೆಲ್ಲುತ್ತೇವೆಂಬ ವಿಶ್ವಾಸ ಹೆಚ್ಚಾಗಿದೆ. ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್‌ಗೆ ಸಿದ್ದರಾಮಯ್ಯ ಮಾಡಿದ ಮೋಸ ಸಿಟ್ಟು ಕಾಯುತ್ತಿದ್ದರೂ ಈಗ ಅವಕಾಶ ಕೊಟ್ಟಿದ್ದೇವೆ. ಮುನಿಯಪ್ಪ, ಆಂಜನೇಯವರನ್ನು ಕೈ ಹಿಡಿಯದಿರುವುದು ಗೊತ್ತಿದೆ. ಒಳಮೀಸಲಾತಿ ಹೆಚ್ಚಳ, ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ನಮ್ಮ ಕೈ ಹಿಡಿಯುವ ವಿಶ್ವಾಸವಿದೆ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಡುವ ಬಗ್ಗೆ ಕಾಂಗ್ರೆಸ್ ಹೇಳಿದ್ದು, ಯಾವ ಸಮುದಾಯದಿಂದ ಕಿತ್ತು ಕೊಡುತ್ತಾರೆಂಬ ಪ್ರಶ್ನೆ ಎಲ್ಲಾ ಸಮುದಾಯದಲ್ಲಿಯೂ ಇದೆ. ಹೀಗಾಗಿ ಕಾಂಗ್ರೆಸ್ ಇರುವುದು ಮುಸ್ಲಿಂರ ಒಲೈಕೆಗೆ ಎಂಬುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಐದು ವರ್ಷದ ಸಾಧನೆ ಹಿಡಿದು ಮತ ಕೇಳುವುದನ್ನು ಬಿಟ್ಟು ಹಲವು ಉಚಿತ ಯೋಜನೆಗಳನ್ನು ಯಾಕೆ ಘೋಷಿಸಿದರು. ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ ಆಮ್ ಆದ್ಮಿ ದೆಹಲಿಯಲ್ಲಿ ಎನೂ ಮಾಡಿದೆ ಎಂಬುದು ಗೊತ್ತಿಲ್ಲವೆ?, ಪಂಜಾಬಿನಲ್ಲಿ ಕೊಡುತ್ತೇವೆಂದು ಹೇಳಿ ಕೊಟ್ಟಿದ್ದಾರಾ. ಇಂತಹ ಸುಳ್ಳು ಆಶ್ವಾಸನೆಗಳನ್ನು ಐದು ವರ್ಷದ ಆಡಳಿತದಲ್ಲಿ ಎನೂ ಮಾಡಿಲ್ಲ ಎಂಬ ಕಾರಣಕ್ಕೆ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಅಷ್ಟೊಂದು ಬಾರಿ ಪ್ರತಿನಿಧಿಸಿದ್ದರೂ ಕುಡಿಯುವ ನೀರು ಕೊಡಲು ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!