ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ವಿರುದ್ಧ ನಟ ಸಿದ್ಧಾರ್ಥ್ ಅವಹೇಳನಾಕಾರಿ ಟ್ವೀಟ್ ಮಾಡಿ, ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ಇದೀಗ ಸೈನಾ ಸಿದ್ಧಾರ್ಥ್ ಕ್ಷಮೆ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲು ಕೆಟ್ಟ ಜೋಕ್ ಮಾಡಿದ್ದರು. ಈಗ ಕ್ಷಮೆ ಕೇಳಿದ್ದಾರೆ. ಸಿದ್ಧಾರ್ಥ್ ಕ್ಷಮೆ ಕೇಳಿರುವುದು ಸಂತಸ ತಂದಿದೆ. ಈ ಟ್ವೀಟ್ಗಳು ಸಾಮಾಜಿಕ ಜಾಲತಾಣದಲ್ಲಿ ಯಾಕಿಷ್ಟು ವೈರಲ್ ಆಯ್ತು ಎನ್ನುವುದು ನನಗೆ ತಿಳಿದಿಲ್ಲ. ಟ್ವಿಟರ್ ಟ್ರೆಂಡ್ ಆಗಿದ್ದು ನೋಡಿ ಆಶ್ಚರ್ಯವಾಯ್ತು. ಮಹಿಳೆಯನ್ನ ಗುರಿಯಾಗಿಸಿ ಈ ರೀತಿ ಮಾತನಾಡಿದ್ದು ತಪ್ಪು. ಆದರೂ ಪರವಾಗಿಲ್ಲ. ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದಿದ್ದಾರೆ.