Sunday, June 4, 2023

Latest Posts

ಸಿದ್ದು ಸಿಎಂ: ಡಿಕೆಶಿ ಮೊದಲ ರಿಯಾಕ್ಷನ್ ಹೀಗಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಕುರ್ಚಿ ಸಮರ ಅಂತ್ಯ ಕಂಡಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಎಂದು ಘೋಷಣೆಯಾಗಿದೆ. ಈ ಬಗ್ಗೆ ಡಿಕೆಶಿ ಮೊದಲ ರಿಯಾಕ್ಷನ್ ಹೀಗಿದೆ..

ದೊಡ್ಡವರ ಮಾತನ್ನು ಕೇಳಲೇಬೇಕಾಗುತ್ತದೆ. ಕೆಲವೊಂದ ಸಮಯ ಸಂದರ್ಭ ಹೊಂದಾಣಿಕೆ ಮಾಡಲೇಬೇಕಿದೆ. ಗಾಂಧಿ ಕುಟುಂಬದ ಮಾತುಗಳ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.ಗಾಂಧಿ ಕುಟುಂಬದವರು ಹೇಳಿದ ಮೇಲೆ ಕೇಳಲೇ ಬೇಕಾಗುತ್ತದೆ. ಪಕ್ಷ ಎಂದಾದಮೇಲೆ ಮೆಜಾರಿಟಿಗೆ ಪ್ರಾಮುಖ್ಯತೆ ನೀಡಲೇಬೇಕು ಎಂದಿದ್ದಾರೆ.

ಪಾರ್ಲಿಮೆಂಟ್ ಎಲೆಕ್ಷನ್ ಹತ್ತಿರದಲ್ಲೇ ಇದೆ, ರಾಜ್ಯದ ಜನತೆಗೆ ಬದ್ಧರಾಗಿದ್ದೇನೆ, ಜನಸೇವೆ ನನ್ನ ಮೊದಲ ಗುರಿ ಎಂದು ಹೇಳಿದ್ದಾರೆ. ಪಕ್ಷದ ಹಿರಿಯರು ಏನಾದರೂ ಹೇಳುತ್ತಾರೆ ಎಂದರೆ ಅದರಲ್ಲಿ ಸಾಕಷ್ಟು ಆಲೋಚನೆಗಳು ಇದ್ದೇ ಇರುತ್ತವೆ, ರಾಜ್ಯದ ಜನತೆಗೆ ಸಾಕಷ್ಟು ಭರವಸೆ ನೀಡಿದ್ದೇವೆ, ಅವುಗಳನ್ನು ಈಡೇರಿಸುವುದೇ ನಮ್ಮ ಗುರಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!