ಅಭಿವೃದ್ಧಿಗಾಗಿ ತಂದೆಯ ಸಮಾಧಿ ಕೆಡವಿದ ಒಡಿಶಾ ಸಿಎಂ: ಮೆಚ್ಚುಗೆಯ ಸುರಿಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ‌

ರಾಜ್ಯದ ಮುಖ್ಯಮಂತ್ರಿಯಾಗಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಾಡಿದ್ದು ಅದನ್ನೇ. ಇವರು ಮಾಡಿದ ಉತ್ತಮ ಕೆಲಸಕ್ಕಾಗಿ ಹ್ಯಾಟ್ಸ್ ಆಫ್ ಹೇಳ್ತಿದಾರೆ ಜನ.

ಪುರಿಯ ಸ್ಮಶಾನದಲ್ಲಿ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯಾಗುವ ಕಾರಣದಿಂದ ನವೀನ್ ಪಟ್ನಾಯಕ್ ತಮ್ಮ ತಂದೆಯ ಸಮಾಧಿಯನ್ನು ತೆಗೆದಿದ್ದಾರೆ. ಹಿರಿಯ ಅಧಿಕಾರಿ ಮತ್ತು ಅವರ ಖಾಸಗಿ ಕಾರ್ಯದರ್ಶಿ ವಿಕೆ ಪಾಂಡಿಯನ್ ಅವರು ಪುರಿಯಲ್ಲಿರುವ ಸ್ವರ್ಗ್ ದಲಾದಲ್ಲಿ ತಮ್ಮ ತಂದೆ ಬಿಜು ಪಟ್ನಾಯಕ್ ಅವರ ಸಮಾಧಿಯನ್ನು ತೆಗೆದುಹಾಕಲು ಆದೇಶಿಸಿದ್ದಾಗಿ ಬಹಿರಂಗಪಡಿಸಿದ್ದಾರೆ.

ಪುರಿ ಅಂತರಾಷ್ಟ್ರೀಯ ಯಾತ್ರಿಕರನ್ನು ಆಕರ್ಷಿಸುವ ಪ್ರದೇಶವಾಗಿದೆ. ಮಂಗಳವಾರ (ಮೇ 16, 2023) ದುಬೈನಲ್ಲಿ ನಡೆದ ಒಡಿಶಾ ದಿವಸ್ ಆಚರಣೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಪಾಂಡಿಯನ್, ನವೀನ್ ಪಟ್ನಾಯಕ್ ಅವರು ಅಭಿವೃದ್ಧಿಗಾಗಿ ನಗರದ ಸೌಂದರ್ಯೀಕರಣಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ತಂದೆಯ ಸಮಾಧಿಯನ್ನು ತೆಗೆದುಹಾಕಲು ಆದೇಶಿಸಿದ್ದರು ಎಂದು ಬಹಿರಂಗಪಡಿಸಿದರು.

ಜನರಿಗೆ ಒಳಿತಾಗುವ ಯಾವುದನ್ನೂ ಎದುರಿಸುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿಎಂ ಹಿಂಜರಿಯುವುದಿಲ್ಲ ಎಂದು ಪಾಂಡ್ಯನ್ ಬಹಿರಂಗಪಡಿಸಿದರು. ಪುರಿ ಮಹಾಪ್ರಸ್ಥಾನದ ಆಧುನೀಕರಣ ಕಾಮಗಾರಿಗೆ ಅಡ್ಡಿಯಾಗುತ್ತಿರುವ ತಂದೆಯ ಸಮಾಧಿಯನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದನ್ನು ಪಾಂಡ್ಯನ್ ಈ ಸಂದರ್ಭದಲ್ಲಿ ಸ್ಮರಿಸಿದರು.

ʻತನ್ನ ತಂದೆ ಸಮಾಧಿಯಲ್ಲಿ ಉಳಿಯುವುದಿಲ್ಲ ಮತ್ತು ಯಾವಾಗಲೂ ನನ್ನ ಹೃದಯದಲ್ಲಿರುತ್ತಾರೆʼ ಎಂದು ನವೀನ್ ಪಟ್ನಾಯಕ್ ಅವರು ಸಮಾಧಿ ತೆರವಿಗೆ ಆದೇಶ ನೀಡಿದ್ದರು. ನವೀನ್ ಪಟ್ನಾಯಕ್ ಮಾತ್ರವಲ್ಲ ಅವರ ಕುಟುಂಬದವರೂ ಇದನ್ನೇ ಹೇಳುತ್ತಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!