Tuesday, March 28, 2023

Latest Posts

ಸಿದ್ದು ಸವದಿ ಅಭ್ಯರ್ಥಿ ಹೇಳಿಕೆ : ಬಾಯತಪ್ಪಿ ಹೇಳಿದ್ದೇನೆಂದ ಯಡಿಯೂರಪ್ಪ

ಹೊಸದಿಗಂತ ವರದಿ ಬಾಗಲಕೋಟೆ:

ಬರುವ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿಯಿಂದ ತೇರದಾಳ ಮತಕ್ಷೇತ್ರಕ್ಕೆ ಶಾಸಕ ಸಿದ್ದು ಸವದಿ ಎಂದು ಹೇಳಿಕೆ ನೀಡಿದ್ದು ಬಾಯಿತಪ್ಪಿನಿಂದ‌ ಹೇಳಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಸಿದರು.

ಬಾಗಲಕೋಟೆ ಬಿವ್ಹಿವ್ಹಿ ಸಂಘದ ಗೆಸ್ಟ್ ಹೌಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಅಧಿಕಾರ ನಮ್ಮ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಇದೆ. ನಿನ್ನೆ ಸಿದ್ದು ಸವದಿ ಅಭ್ಯರ್ಥಿ ಎಂದು ಹೇಳಿದ್ದು ಬಾಯತಪ್ಪಿನಿಂದ ಹೇಳಿದ್ದೇನೆ. ಅಭ್ಯರ್ಥಿ ಘೋಷಣೆ ಮಾಡುವ ಅಧಿಕಾರ ನಮಗೆ ಇಲ್ಲ ಎಂದರು.

ಬಾಗಲಕೋಟೆ ಯಲ್ಲಿ ಬಿಜೆಪಿಯಿಂದ ಉಚ್ಛಾಟಿತ ಕೆಲವರು ಪಕ್ಷಕ್ಕೆ ಮುಜಗುರು ಆಗುವ ರೀತಿ ಮಾಡುತ್ತಿರುವ ಹಾಗೂ ಅವರನ್ನು ಹದ್ದುಬಸ್ತಿನಲ್ಲಿಡುವ ಕುರಿತು ಶಾಸಕ ವೀರಣ್ಣ ಚರಂತಿಮಠ ಅವರು ಹೇಳಿದ್ದರ ಕುರಿತು ಮಾಧ್ಯಮದವರು ಕೇಳಿದಾಗ ಶಾಸಕ ಚರಂತಿಮಠವರನ್ನು ಕರೆದು ಇತ್ಯರ್ಥಪಡಿಸುತ್ತೇವೆ. ಪಕ್ಷದಲ್ಲಿ ಯಾವುದೇ ಗೊಂದಲ ಆಗದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.

ಸಚಿವ ವಿ.ಸೋಮಣ್ಣ‌ ದೆಹಲಿ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ ಬಿಟ್ಟು ಹೋಗುವುದಿಲ್ಲ. ಅವರು ಒಳ್ಳೆಯ ಕೆಲಸವನ್ನು ಸಚಿವರಾಗಿ ಮಾಡಿದ್ದು ಅವರು ಪಕ್ಷದಲ್ಲೇ ಇರುತ್ತಾರೆ ಎಂದರು.

ರಾಜ್ಯದಲ್ಲಿ‌ಮತ್ತೊಮ್ಮೆ ಬಿಜೆಪಿ‌ಅಧಿಕಾರಕ್ಕೆ ಬರಲಿದೆ. 140 ಸ್ಥಾನ ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ಸಚಿವ ಭೈರತಿ ಬಸವರಾಜ, ಶಾಸಕ ವೀರಣ್ಣ ಚರಂತಿಮಠ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!