ಕೆಎಸ್‌ಆರ್‌ಟಿಸಿ ಬೆಂಗಳೂರು ಮತ್ತು ಮೈಸೂರು ಬಸ್ ದರ ₹15 ರಿಂದ ₹20ವರೆಗೆ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಬೆಂಗಳೂರು ಮೈಸೂರುಎಕ್ಸ್​ಪ್ರೆಸ್​ ವೇಯಲ್ಲಿ ಟೋಲ್ ವಸೂಲಿ ಆರಂಭವಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಉಭಯ ನಗರಗಳ ನಡುವಿನ ಪ್ರಯಾಣದ ಟಿಕೆಟ್ ದರವನ್ನು ₹15 ರಿಂದ ₹20ರ ವರೆಗೆ ಹೆಚ್ಚಳ ಮಾಡಿದೆ.

ಟೋಲ್ ಶುಲ್ಕ ಸರಿದೂಗಿಸಲು ಕರ್ನಾಟಕ ಸಾರಿಗೆ ಬಸ್‌ ಪ್ರಯಾಣ ದರದಲ್ಲಿ ₹15, ರಾಜಹಂಸ ಬಸ್‌ ಪ್ರಯಾಣ ದರದಲ್ಲಿ ₹18, ಐರಾವತ ಸೇರಿ ಮಲ್ಟಿ ಆ್ಯಕ್ಸೆಲ್ ಬಸ್‌ಗಳ ಪ್ರಯಾಣ ದರದಲ್ಲಿ ₹20 ಹೆಚ್ಚಳ ಮಾಡಲಾಗಿದೆ.

ಎಕ್ಸ್‌ಪ್ರೆಸ್ ಹೈವೆಯಲ್ಲಿ ಪ್ರಯಾಣಿಸುವ ಬಸ್‌ಗಳಿಗೆ ಮಾತ್ರ ಈ ದರ ಅನ್ವಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಉಭಯ ನಗರಗಳ ನಡುವಿನ ಎಲೆಕ್ಟ್ರಿಕ್ ಬಸ್ ಮತ್ತು ವೋಲ್ವೋ ಬಸ್‌ಗಳ ಟಿಕೆಟ್‌ಗಳಿಗೂ ದರ ಹೆಚ್ಚಳ ಅನ್ವಯವಾಗಲಿದೆ. ಟೋಲ್ ಶುಲ್ಕವನ್ನು ಭರಿಸುವುದಕ್ಕಾಗಿ ಮಾತ್ರ ಈ ದರ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!