Wednesday, March 29, 2023

Latest Posts

BOLLYWOOD| ನವವಧು ಕಿಯಾರಾಗೆ ಗ್ರಾಂಡ್‌ ವೆಲ್‌ಕಮ್:‌ ವೈರಲ್ ಆಗುತ್ತಿವೆ ವಿಡಿಯೋಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ನಡುವೆ ಇರೋದು ಪ್ರೇಮವೇ? ಸ್ನೇಹವೇ? ಎಂಬ ಗೊಂದಲಗಳಿಗೆ ಅಧಿಕೃತವಾಗಿ ತೆರೆ ಬಿದ್ದಿದೆ. ‘ಶೇರ್ಷಾ’ ಸಿನಿಮಾದ ಮೂಲಕ ಮೊಟ್ಟಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ ಈ ಜೋಡಿ ಆ ಸಿನಿಮಾದ ವೇಳೆಯೇ ಪ್ರೀತಿಯಲ್ಲಿ ಬಿದ್ದಿದ್ದು, ನಿನ್ನೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ್ ಅರಮನೆಯಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಮದುವೆ ಅದ್ಧೂರಿಯಾಗಿ ಹಸೆಮಣೆ ಏರಿದರು.

ಫೆಬ್ರವರಿ 4 ರಿಂದ 7 ರವರೆಗೆ ನಡೆದ ವಿವಾಹ ಸಮಾರಂಭದಲ್ಲಿ ಇಶಾ ಅಂಬಾನಿ, ಕರಣ್ ಜೋಹರ್, ಶಾಹಿದ್ ಕಪೂರ್, ಮನೀಶ್ ಮಲ್ಹೋತ್ರಾ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ಮದುವೆಗೆ ಸಂಬಂಧಿಸಿದ ಯಾವುದೇ ಫೋಟೋಗಳು ಅಥವಾ ವಿಡಿಯೋಗಳು ಹೊರಬರದಂತೆ ದಂಪತಿ ನೋಡಿಕೊಂಡಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ಸ್ವತಃ ತಮ್ಮ ಮದುವೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ನವ ವಧು ಕಿಯಾರಾ ಮದುವೆಯಾದ ಮೊದಲ ಬಾರಿಗೆ ಗಂಡನ ಮನೆಗೆ ಹೆಜ್ಜೆ ಹಾಕುತ್ತಿರುವ ವೀಡಿಯೊಗಳು ಪ್ರಸ್ತುತ ವೈರಲ್ ಆಗುತ್ತಿವೆ. ನಿನ್ನೆ (ಫೆಬ್ರವರಿ 8) ರಾತ್ರಿ ದೆಹಲಿಯಲ್ಲಿರುವ ಸಿದ್ದಾರ್ಥ್ ಮನೆಗೆ ಆಗಮಿಸಿದ ನವ ವಧು-ವರರಿಗೆ ಸಿದ್ದಾರ್ಥ್ ಕುಟುಂಬಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ಕ್ರಮದಲ್ಲಿ ಸಿದ್ಧಾರ್ಥ್ ಜೊತೆ ಕಿಯಾರಾ ಡ್ಯಾನ್ಸ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!