Tuesday, March 28, 2023

Latest Posts

BOLLYWOOD| ಒಂದಾದ ಲವ್‌ ಬರ್ಡ್ಸ್:‌ ಸೀಕ್ರೇಟಾಗಿ ಸಪ್ತಪದಿ ತುಳಿದ ಕಿಯಾರಾ-ಸಿದ್ಧಾರ್ಥ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್‌ನ ಎಲ್ಲಾ ಸೆಲೆಬ್ರಿಟಿಗಳು ಒಬ್ಬರ ನಂತರ ಒಬ್ಬರು ಮದುವೆಯಾಗುತ್ತಿದ್ದಾರೆ. ಈ ಮದುವೆಯ ಸದ್ದು ಶುರುವಾಗಿದ್ದು ಕತ್ರೀನಾ.. ಆಲಿಯಾ, ಅಥಿಯಾ ಶೆಟ್ಟಿ ಮತ್ತು ಈಗ ಕಿಯಾರಾ. ಸಿದ್ದಾರ್ಡ್ ಮಲ್ಹೋತ್ರಾ ಅಭಿನಯದ ‘ಶೆರ್ಷಾ’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ಆ ಸಿನಿಮಾದ ಶೂಟಿಂಗ್ ವೇಳೆ ಅವರಿಬ್ಬರ ಪರಿಚಯ ಪ್ರೀತಿಯಾಗಿ ಇದೀಗ ಅಧಿಕೃತವಾಗಿ ದಂಪತಿಯಾಗಿದ್ದಾರೆ.

ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಹಸಮಣೆ ಏರಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ನೆಟ್ಟಿಗರು ಈ ಮದುವೆಯಲ್ಲಿ ಕೆಲಸ ಮಾಡುವವರನ್ನು ಪ್ರಶ್ನಿಸುತ್ತಿರುವುದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ, ಕಿಯಾರಾ ಮತ್ತು ಸಿದ್ದಾರ್ಡ್ ಏಳು ಹೆಜ್ಜೆ ಹಾಕಿದ್ದಾರೆ ಮತ್ತು ಅವರಿಬ್ಬರೂ ಯಾವ ಡ್ರೆಸ್ ಧರಿಸಿದ್ದರು ಎಂದು ಅಲ್ಲಿನ ಕಾರ್ಮಿಕರು ಹೇಳಿದ್ದಾರೆ.

ಅಲ್ಲದೆ, ಈ ಮದುವೆಯಲ್ಲಿ ಭಾಗವಹಿಸಿದ್ದ ಕೆಲವು ಅತಿಥಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಮಂಟಪವನ್ನು ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ಎಲ್ಲವನ್ನು ಸೀಕ್ರೆಟ್ ಆಗಿ ಮೆಂಟೇನ್ ಮಾಡುತ್ತಾ ಬಂದಿರುವ ಕಿಯಾರಾ, ಹಾಗೂ ಸಿದ್ದಾರ್ಥ್ ಮದುವೆ ಫೋಟೋಗಳನ್ನು ಗೌಪ್ಯವಾಗಿಟ್ಟಿರುವುದರಿಂದ ಅಭಿಮಾನಿಗಳಿಗೆ ಬೇಸರಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!