ಹೆಣಗಳ ದಿಬ್ಬವಾದ ಟರ್ಕಿ-ಸಿರಿಯಾ: 7,700 ಗಡಿ ದಾಟಿದ ಸಾವಿನ ಸಂಖ್ಯೆ, ಹೇಗಿದೆ ರಕ್ಷಣಾ ಕಾರ್ಯಾಚರಣೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

‌ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪಗಳಿಂದ ಸತ್ತವರ ಸಂಖ್ಯೆ ಕನಿಷ್ಠ 7,726 ಕ್ಕೆ ಏರಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಮಾರಣಾಂತಿಕ ಭೂಕಂಪಗಳ ನಂತರ ಟರ್ಕಿ ಮತ್ತು ಸಿರಿಯಾದಲ್ಲಿ ಕನಿಷ್ಠ 42,259 ಜನರು ಗಾಯಗೊಂಡಿದ್ದಾರೆ.
ಟರ್ಕಿಯಲ್ಲಿ ಸೋಮವಾರ ಸಂಭವಿಸಿದ ಭೂಕಂಪಕ್ಕೆ ಕನಿಷ್ಠ 5,894 ಜನರು ಸಾವನ್ನಪ್ಪಿ 34,810 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ಹೇಳಿದ್ದಾರೆ. ಸಿರಿಯಾದಲ್ಲಿ ಕನಿಷ್ಠ 1,832 ಜನರು ಸಾವನ್ನಪ್ಪಿ ಮತ್ತು 3,849 ಜನರು ಗಾಯಗೊಂಡಿದ್ದಾರೆ.

ಟರ್ಕಿಯಲ್ಲಿ ಸುಮಾರು 5,775 ಕಟ್ಟಡಗಳು ಕುಸಿದಿವೆ ಎಂದು ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಏಜೆನ್ಸಿಯ ಪ್ರಧಾನ ನಿರ್ದೇಶಕ (ಎಎಫ್‌ಎಡಿ) ಓರ್ಹಾನ್ ಟಾಟರ್ ಹೇಳಿದ್ದಾರೆ. ಸುಮಾರು 7,500 ಟರ್ಕಿಶ್ ಸೈನಿಕರು ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿರುವುದಾಗಿ ಟರ್ಕಿಯ ರಕ್ಷಣಾ ಸಚಿವ ಹುಲುಸಿ ಅಕರ್ ಹೇಳಿದರು.

(ಬುಧವಾರ) ಇಂದು ಹೆಚ್ಚುವರಿ 1,500 ಸಿಬ್ಬಂದಿ ತಂಡವನ್ನು ಸೇರಿಕೊಳ್ಳಲಿದ್ದು, 75 ಮಿಲಿಟರಿ ವಿಮಾನಗಳನ್ನು ಈ ಪ್ರದೇಶಕ್ಕೆ ರವಾನಿಸಲಾಗಿದೆ. ಪಶ್ಚಿಮದಿಂದ ಒಂಬತ್ತು ಕಮಾಂಡೋ ಬೆಟಾಲಿಯನ್‌ಗಳು ಈ ಪ್ರದೇಶಕ್ಕೆ ಆಗಮಿಸಿವೆ ಮತ್ತು ಸೈಪ್ರಸ್‌ನಿಂದ ನಾಲ್ಕು ಕಮಾಂಡೋ ಬೆಟಾಲಿಯನ್‌ಗಳು ಈ ಪ್ರದೇಶಕ್ಕೆ ಆಗಮಿಸಲಿವೆ ಎಂದು ಹೇಳಿದರು. ಹವಾಮಾನ ವೈಪರೀತ್ಯದಿಂದ ಉಂಟಾದ ತೊಂದರೆಗಳ ನಡುವೆಯೂ ತಂಡಗಳು ವಿಪತ್ತು ಪ್ರದೇಶವನ್ನು ತಲುಪಲು ಮತ್ತು ಕೆಲಸದಲ್ಲಿ ಭಾಗವಹಿಸಲು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!