ಆಸ್ಕರ್‌ ಪ್ರಶಸ್ತಿ ಪಡೆದ ಮೊದಲ ಕಪ್ಪು ವರ್ಣೀಯ ನಟ ಸಿಡ್ನಿ ಪಾಯ್ಟಿಯರ್‌ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅತ್ಯುತ್ತಮ ನಟನೆಗಾಗಿ ಆಸ್ಕರ್ ಪ್ರಶಸ್ತಿ ಪಡೆದ ಸಿಡ್ನಿ ಪೊಯ್ಟಿಯರ್‌ (94) ನಿಧನರಾಗಿದ್ದಾರೆ.
ಆಸ್ಕರ್‌ ಪ್ರಶಸ್ತಿ ಪಡೆದ ಮೊದಲ ಕಪ್ಪು ವರ್ಣೀಯ ಕಲಾವಿದ ಸಿಡ್ನಿ ಪೊಯ್ಟಿಯರ್.‌ ಲಿಲೀಸ್‌ ಆಫ್‌ ದಿ ಫೀಲ್ಡ್‌ ನಲ್ಲಿ ತಮ್ಮ ಪಾತ್ರದ ನಿರ್ವಹಣೆಗೆ ಮೆಚ್ಚಿ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.
ಸಿಡ್ನಿ ಪೊಯ್ಟಿಯರ್ ಅವರ ನಿಧನದ ಬಗ್ಗೆ ಬಹಮಿಯರ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
1927ರಲ್ಲಿ ಜನಿಸಿದ ಸಿಡ್ನಿ ಪೊಯ್ಟಿಯರ್ ಅವರು, ಬಾಲ್ಯದಲ್ಲಿ ಕೇವಲ ಒಂದು ವರ್ಷ ಶಿಕ್ಷಣ ಪಡೆದರು. ಬಳಿಕ ತಮ್ಮ ಕುಟುಂಬ ಬಡತನದಿಂದ ಹೋರಾಡುತ್ತಿರುವುದನ್ನು ಕಂಡು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರ ಮೆಚ್ಚುಗೆ ಗಳಿಸಿದರು.
2009ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಸಿಡ್ನಿ ಪೊಯ್ಟಿಯರ್ ಅವರಿಗೆ ಅತ್ಯುತ್ತಮ ನಾಗರಿಕ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಸಿಡ್ನಿ ಪೊಯ್ಟಿಯರ್ ಅವರು ಗೆಸ್ ಹು ಈಸ್ ಕಮಿಂಗ್ ಟು ಡಿನ್ನರ್‌’, ‘ಹೀಟ್ ಆಫ್ ದಿ ನೈಟ್‌’, ‘ಟು ಸರ್, ವಿತ್ ಲವ್‌ ಚಿತ್ರದಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!