ನಿಮ್ಮ ಸಂಗಾತಿ ಈ ರೀತಿ ವರ್ತಿಸಿದರೆ ನೀವು ಮೋಸ ಹೋಗುತ್ತಿದ್ದೀರ ಎಂದರ್ಥ!

ಮುಂಚೆಗಿಂತ ಈಗೆಲ್ಲಾ ಕಪಲ್ಸ್‌ ಜೊತೆಯಾಗಿರೋದು ತುಂಬಾ ಕಡಿಮೆ. ಲವ್‌ ಅಥವಾ ಅರೇಂಜ್‌ ಮ್ಯಾರೇಜ್‌ ಎರಡರಲ್ಲೂ ಬಿರುಕು ಇತ್ತೀಚೆಗೆ ಹೆಚ್ಚಾಗಿದೆ. ಯಾವುದೇ ಸಂಬಂಧದಲ್ಲಿಯಾದರೂ ಪರಸ್ಪರ ಮಾತುಕತೆ, ವರ್ತನೆಗಳೇ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಅದೇ ರೀತಿ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿರಬಹುದು ಎಂಬ ಸಂದೇಹವಿದ್ದರೆ ಅವರ ವರ್ತನೆಗಳನ್ನು ಗಮನಿಸಿ…

 • ಒಂದು ಕ್ಷಣವೂ ತಮ್ಮ ಮೊಬೈಲ್‌ ಬಿಟ್ಟು ಇರೋದಿಲ್ಲ.
 • ಬೇರೆ ಹುಡುಗಿಯರ ಜತೆ ಹೆಚ್ಚು ಫ್ಲರ್ಟ್ ಮಾಡುತ್ತಾರೆ.
 • ಎಲ್ಲಾ ತಪ್ಪು ನಿಮ್ಮದೇ ಎಂದು ದೂರುತ್ತಾರೆ.
 • ತಮ್ಮ ಫಿಟ್‌ ನೆಸ್‌ ಬಗ್ಗೆ ಎಂದಿಲ್ಲದ ಕಾಳಜಿ ಈಗ ಬರುತ್ತದೆ.
 • ನಿಮ್ಮ ಪ್ರಶ್ನೆಗಳಿಗೆ ಕೇವಲ ಒಂದು ಪದದ ಉತ್ತರ ಕೊಡ್ತಾರೆ.
 • ಯಾವಾಗಲೂ ಯಾರಿಗೋ ಮೆಸೇಜ್‌ ಮಾಡ್ತಿರುತ್ತಾರೆ. ಆದರೆ ಯಾರು ಅಂತ ಹೇಳೋದಿಲ್ಲ.
 • ಖರ್ಚು ಜಾಸ್ತಿ ಮಾಡ್ತಾರೆ.
 • ಮೊದಲು ಜಗಳ ಪ್ರಾರಂಭಿಸೋದೆ ಅವರು.
 • ಅವರ ಡೈಲಿ ರೂಟೀನ್‌ ಸಡನ್‌ ಆಗಿ ಬದಲಾಗಿರುತ್ತೆ.
 • ಸೋಷಿಯಲ್‌ ಮಿಡಿಯಾದಲ್ಲಿ ಹುಡುಗಿಯರ ಪೋಸ್ಟ್‌ ಗೆ ಲೈಕ್ಸ್‌ ಹೆಚ್ಚು ಮಾಡ್ತಾರೆ.
 • ನೀವು ಮಾಡುವ ಎಲ್ಲಾ ಕೆಲಸಗಳನ್ನೂ ದೂಷಿಸುತ್ತಾರೆ.
 • ಕೆಲವು ದಿನಗಳು ನಿಮ್ಮನ್ನು ಮಾತನಾಡಿಸೋದನ್ನೇ ಬಿಟ್ಟು ಬಿಡ್ತಾರೆ.
 • ನಿಮ್ಮ ಖುಷಿ ಸಮಯವನ್ನು ಹಾಳು ಮಾಡೋಕೆ ಪ್ರಯತ್ನಿಸುತ್ತಾರೆ.
 • ತಮ್ಮ ಡ್ರೆಸ್ಸಿಂಗ್‌ ಸ್ಟೈಲ್‌ ಬದಲಿಸಿಕೊಳ್ತಾರೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!