ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಬೆಚ್ಚಿಬೀಳುವಂಥ ಘಟನೆಯೊಂದು ನಡೆದಿದೆ. ನಗರದ ಹೊರವಲಯದ ಬನ್ನೇರುಘಟ್ಟದಲ್ಲಿ ಕೈ, ಕಾಲು ಹಾಗೂ ರುಂಡವಿಲ್ಲದ, ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿದೆ.
ಬನ್ನೇರುಘಟ್ಟದ ಜನತಾ ಕಾಲೋನಿ ನಿವಾಸಿ ಗೀತಾರನ್ನು ಕೊಲೆ ಮಾಡಿ ಚರಂಡಿಯಲ್ಲಿ ಹಾಕಲಾಗಿದೆ. ಗೀತಾ ಪತಿ ತೀರಿಕೊಂಡಿದ್ದು, ಇಬ್ಬರು ಮಕ್ಕಳನ್ನು ಮದುವೆ ಮಾಡಿ ಕಳಿಸಿದ್ದರು. ಸಾಫ್ಟ್‌ವೇರ್ ಕಂಪನಿಯಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಾ ಗೀತಾ ಜೀವನ ಸಾಗಿಸುತ್ತಿದ್ದರು.
ಗೀತಾ ಮಗಳು ನಾಲ್ಕು ದಿನದಿಂದ ತಾಯರಿಗೆ ಕರೆ ಮಾಡುತ್ತಿದ್ದು, ಫೋನ್ ರಿಸೀವ್ ಮಾಡಿಲ್ಲ.ತದನಂತರ ಗೀತಾ ಮನೆಗೆ ಬಂದು ನೋಡಿದ್ದು, ಮನೆಗೆ ಬೀಗ ಹಾಕಿತ್ತು. ಅವರು ವಾಪಾಸ್ ಹೋದ ನಂತರ ಮನೆಯ ಮುಂಭಾಗದ ಚರಂಡಿಯಿಂದ ವಾಸನೆ ಬರಲಾರಂಭಿಸಿದೆ.
ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗೀತಾ ಮನೆಯ ಪಕ್ಕದಲ್ಲಿ ಬಿಹಾರ ಮೂಲದ ಮೂವರು ಯುವಕರು ವಾಸವಾಗಿದ್ದು, ಅವರ ಮೇಲೆ ಅನುಮಾನವಿದೆ ಎಂದು ಪೊಲೀಸರು ಹೇಳಿದ್ದಾರೆ. ಚಿನ್ನದ ಆಸೆಗಾಗಿ ಈ ರೀತಿ ಮಾಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.