SHOCKING | ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈಗಲೂ ಸಿಮಿ ಸಂಘಟನೆ ಸಕ್ರಿಯ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈಗಲೂ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆ ಸಕ್ರಿಯವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ ನೀಡಿದೆ.

2001ರಲ್ಲೇ ಸಿಮಿ ಸಂಘಟನೆ ಮೇಲೆ ನಿಷೇಧ ಹೇರಿದ್ದರೂ ಈಗಲೂ ಹಲವು ರಾಜ್ಯಗಳಲ್ಲಿ ಈ ಸಂಘಟನೆಗಳು ಜೀವಂತವಾಗಿದೆ, ಬೇರೆ ಬೇರೆ ಸಂಘಟನೆಗಳ ಹೆಸರಿನಲ್ಲಿ ಈ ಸಂಘಟನೆ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ.

ವಿದೇಶಗಳಲ್ಲಿ ಇರುವ ಸಹಚರರು,ನಾಯಕರ ಜತೆ ನಿರಂತರ ಸಂಪರ್ಕದಲ್ಲಿದ್ದು, ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಹೀಗಿರುವಾಗ ಸಂಘಟನೆ ಮೇಲಿನ ನಿಷೇಧ ತೆರವು, ದೇಶದ ಭದ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುತ್ತದೆ ಎಂದು ಕೇಂದ್ರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಸಿಮಿ ಸಂಘಟನೆ ಮೇಲಿನ ನಿಷೇಧ ಹಿಂಪಡೆಯುವಂತೆ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಕೇಂದ್ರ ಉತ್ತರಿಸಿದೆ. ಸಿಮಿ ಸಂಘಟನೆ ಗುರಿ ದೇಶದ ಕಾನೂನು ವಿರೋಧಿ. ಇಸ್ಲಾಂ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಇಗ್ಗೂಡಿಸಿ ಜಿಹಾದ್‌ಗೆ ಬೆಂಬಲ ಪಡೆಯುವ ಯತ್ನ ಮಾಡುತ್ತದೆ. ಕ್ರಾಂತಿ ಹೆಸರಿನಲ್ಲಿ ದೇಶದ ಅಭದ್ರತೆಗೆ ಕಾರಣವಾಗುತ್ತಿದೆ ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!