ವರದಕ್ಷಿಣೆಗಾಗಿ ಪತ್ನಿಯ ಉಗುರು ಕಿತ್ತ ಪಾಪಿ ಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹರಿಯಾಣದ ಕೈಗಾರಿಕಾ ನಗರ ಫರೀದಾಬಾದ್​ನಲ್ಲಿ ವರದಕ್ಷಿಣೆಗಾಗಿ ಪತಿಯು ತನ್ನ ಪತ್ನಿಯ ಉಗುರುಗಳನ್ನೇ ಕಿತ್ತು ಹಾಕಿದ ಘಟನೆ ನಡೆದಿದೆ.
ಈತ ತನ್ನ ತಂದೆ ಹಾಗೂ ಸಹೋದರನ ಜೊತೆಗೂಡಿ ಕಟಿಂಗ್ ಪ್ಲೇಯರ್​ನಿಂದ ಪತ್ನಿಯ ಕಾಲಿನ ಹೆಬ್ಬೆರಳ ಉಗುರುಗಳನ್ನು ಕಿತ್ತು ಪೈಶಾಚಿಕವಾಗಿ ವಿಕೃತಿ ಮೆರೆದಿದ್ದಾನೆ.
ಸಂತ್ರಸ್ತ ಮಹಿಳೆಯು ಹೇಳುವ ಪ್ರಕಾರ, 13 ವರ್ಷಗಳ ಹಿಂದೆ ಆಕೆಯ ವಿವಾಹ ಧೀರಜ್ ನಗರದ ರಾಜೇಶ್ ಎಂಬಾತನೊಂದಿಗೆ ನಡೆದಿತ್ತು. ವಿವಾಹ ನಡೆದು ಕೆಲ ದಿನಗಳವರೆಗೆ ಎಲ್ಲವೂ ಚೆನ್ನಾಗಿ ನಡೆದಿತ್ತು. ಆದರೆ, ನಂತರ ಪತಿ ಸಿಕ್ಕಾಪಟ್ಟೆ ಹೊಡೆಯಲಾರಂಭಿಸಿದ್ದಾನೆ. ತವರಿನಿಂದ 4 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪೀಡಿಸತೊಡಗಿದ್ದಾನೆ.
ಭಾನುವಾರವೂ ಇದೇ ರೀತಿ ವರದಕ್ಷಿಣೆಗಾಗಿ ಪೀಡಿಸತೊಡಗಿದ್ದಾನೆ. ಆದರೆ, ಹಣ ತರಲು ಆಗಲ್ಲ ಎಂದಿದ್ದಕ್ಕೆ ಕೋಪಗೊಂಡ ಆತ ಕಟಿಂಗ್ ಪ್ಲೇಯರ್ ತಂದು ಉಗುರುಗಳನ್ನು ಕೀಳಲಾರಂಭಿಸಿದ್ದಾನೆ. ಆಗ ಮಹಿಳೆಯ ಆರ್ತನಾದ ಕೇಳಿ ಸುತ್ತ ಮುತ್ತಲಿನವರು ಜಮಾಯಿಸಿದಾಗ ಪತಿ ಪರಾರಿಯಾಗಿದ್ದಾನೆ. ಇದರ ನಂತರ ಮಹಿಳೆಯ ತವರು ಮನೆಯವರು ಬಂದು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ವರದಕ್ಷಿಣೆ ಕಲಂ 498, ಹಲ್ಲೆ ಪ್ರಕರಣ 323 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!