Tuesday, March 21, 2023

Latest Posts

SHOCKING | ದುಡಿದು ತಿನ್ನುತ್ತಿದ್ದ ಪತ್ನಿಯ ಕೈಗಳನ್ನೇ ಕತ್ತರಿಸಿದ ಪಾಪಿ ಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಎರಡೂ ಕೈಗಳನ್ನು ಮಚ್ಚಿನಿಂದ ಪತಿ ಕೊಚ್ಚಿಹಾಕಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಗೊಬ್ಬರಗುಂಟೆ ಗ್ರಾಮದ ನಿವಾಸಿ ಮುನಿಕೃಷ್ಣಪ್ಪ ತನ್ನ ಪತ್ನಿ ಚಂದ್ರಕಲಾ ಕೈಯನ್ನು ಕತ್ತರಿಸಿದ್ದಾನೆ.

20 ವರ್ಷಗಳಿಂದ ಸಂಸಾರ ನಡೆಸುತ್ತಿದ್ದ ದಂಪತಿ ಮಧ್ಯೆ ಸಾಕಷ್ಟು ವಿಷಯಕ್ಕೆ ಮನಸ್ತಾಪ ಇತ್ತು. ಪತಿಯ ಹಿಂಸೆ ತಾಳಲಾರದೆ ಪತ್ನಿ ಹಾಗೂ ಮಗಳು ಬೇರೆ ಮನೆ ಮಾಡಿಕೊಂಡಿದ್ದರು. ದಿನವೂ ಗಾರ್ಮೆಂಟ್ಸ್‌ಗೆ ಹೋಗಿ ಇಬ್ಬರು ದುಡಿದು ಜೀವನ ನಡೆಸುತ್ತಿದ್ದರು.

ನಿನ್ನ ಸಂಜೆ ಎಂದಿನಂತೆ ಚಂದ್ರಕಲಾ ಕೆಲಸ ಮುಗಿಸಿ ಮನೆಗೆ ಬಂದಾಗ ಪತಿ ಆಕೆಯ ಎರಡೂ ಕೈಯನ್ನು ಕತ್ತರಿಸಿದ್ದಾನೆ. ಚಂದ್ರಕಲಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!