Friday, March 24, 2023

Latest Posts

ಪತ್ನಿಯನ್ನು ಕೊಂದು ದೇಹವನ್ನು ಪೀಸ್ ಪೀಸ್ ಮಾಡಿ ನೀರಿನ ಟ್ಯಾಂಕ್‌ನಲ್ಲಿ ತುಂಬಿಸಿಟ್ಟ ಪಾಪಿ ಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಛತ್ತೀಸ್ ಗಡದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ದೇಹವನ್ನು ಪೀಸ್ ಪೀಸ್ ಮಾಡಿನೀರಿನ ಟ್ಯಾಂಕ್‌ನಲ್ಲಿ ತುಂಬಿಸಿಟ್ಟ ಘಟನೆ ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದೆ.

10 ವರ್ಷಗಳ ಹಿಂದೆ ಮದುವೆಯಾಗಿದ್ದ ಇವರಿಗೆ ಇಬ್ಬರು ಮಕ್ಕಳಿದ್ದು, ಅವರು ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಾರೆ.ಪವನ್ ಹಾಗೂ ಸತಿ ಸಾಹು ಲವ್ ಮ್ಯಾರೇಜ್ (Pavan Sati Sahu Love Marriage). ಇವರಿಬ್ಬರ ಪ್ರೀತಿಗೆ ಮನೆಯವರ ವಿರೋಧವಿದ್ದರೂ ಇಬ್ಬರೂ ಮದುವೆಯಾಗಿದ್ದಾರೆ. ಇದರಿಂದ ಸತಿ ಸಾಹು ಮನೆಯವರು ಈಕೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದರು. ಇತ್ತ ನೆರೆಹೊರೆಯವರ ಜೊತೆನೂ ಸತಿ ಅಷ್ಟೊಂದು ಕ್ಲೋಸ್ ಇರಲಿಲ್ಲ. ಹೀಗಾಗಿ 2 ತಿಂಗಳ ಹಿಂದೆಯೇ ಸತಿ ಕೊಲೆಯಾದ್ರೂ ಯಾರೊಬ್ಬರ ಗಮನಕ್ಕೂ ಬಂದಿರಲಿಲ್ಲ.

ಆದರೆ ನಕಲಿ ಕರೆನ್ಸಿ ದಂಧೆ ಸಂಬಂಧ ತನಿಖೆ ನಡೆಸಲು ಪೊಲೀಸರು ಪವನ್ ಮನೆಗೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಹಾಸಿಗೆ ಕೆಳಗೆ ನೀರು ತುಂಬಿಸುವ ಪ್ಲಾಸ್ಟಿಕ್ ಚೀಲ (Polythin Bags) ಗಳಲ್ಲಿ ತುಂಬಿಸಿಟ್ಟಿರುವುದು ಬಯಲಾಗಿದೆ. ಈ ಸಂಬಂಧ ಪೊಲೀಸರು ಪವನ್ ನನ್ನು ವಿಚಾರಣೆ ನಡೆಸಿದಾಗ, ದಾಂಪತ್ಯ ದ್ರೋಹ ಮಾಡುವ ಶಂಕೆಯಿಂದ ನಮ್ಮಿಬ್ಬರ ಮಧ್ಯೆ ಜಗಳವಾಯಿತು. ಮಾತಿಗೆ ಮಾತು ಬೆಳೆದಿದ್ದರಿಂದ ಸಿಟ್ಟಲ್ಲಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ತಿಳಿಸಿದ್ದಾನೆ.

ಪ್ರಕರಣ ಸಂಬಂಧಿಸಿದಂತೆ ಆರೋಪಿ ಪತಿ ಪವನ್ ಸಿಂಗ್ ಠಾಕೂರ್ ನನ್ನು ಬಿಲಾಸ್ಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪೊಲೀಸರ ಪ್ರಕಾರ, ಜನವರಿ 6 ರಂದು ದಂಪತಿಗಳು ಜಗಳವಾಡಿದರು. ನಂತರ ಅವರು ಕೋಪದ ಭರದಲ್ಲಿ ಆಕೆಯ ಕತ್ತು ಹಿಸುಕಿ ಕೊಂದನು. ಬಳಿಕ ಗ್ರೈಂಡರ್-ಕಟರ್‍ನಿಂದ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದನು. ನಂತರ ಹೊರಗೆ ಹೋಗಿ ಟೇಪ್, ಪ್ಲಾಸ್ಟಿಕ್ ಚೀಲಗಳು ಮತ್ತು ನೀರಿನ ಕ್ಯಾನ್ ಖರೀದಿಸಿದ್ದಾನೆ. ದೇಹದ ಭಾಗಗಳನ್ನು ಅದರೊಳಗೆ ತುಂಬಿಸಿ ಟೇಪ್ ಹಾಕಿದ್ದಾನೆ. ಪತ್ನಿಯನ್ನು ಯಾರೂ ಹುಡುಕಲು ಬರಲ್ಲ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಆದರೆ ಕರೆನ್ಸಿ ಜಾಡು ಪೊಲೀಸರನ್ನು ಅವನ ಬಳಿಗೆ ಕರೆದೊಯ್ಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!