ಗಾಯಕ ಎಲ್​.ವಿ. ರೇವಂತ್ ಮುಡಿಗೆ ತೆಲುಗು ‘ಬಿಗ್ ಬಾಸ್’ ಟ್ರೋಫಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೆಲಿವಿಷನ್ ನಲ್ಲೀಗ ಬಿಗ್ ಬಾಸ್ ಕಾರ್ಯಕ್ರಮಗಳ ಸರದಿ. ಎಲ್ಲಾ ಭಾಷೆಗಳಲ್ಲೂ ಈಗ ರಿಯಾಲಿಟಿ ಶೋ ನಡೆಯುತ್ತಿದ್ದು, ಎಲ್ಲರು ಇಷ್ಟಪಟ್ಟು ನೋಡುತ್ತಾರೆ.

ಕನ್ನಡ , ಹಿಂದಿ, ತಮಿಳು, ಮರಾಠಿ ,ತೆಲುಗು ಭಾಷೆಗಳಲ್ಲಿ ಸದ್ಯ ನಡೆಯುತ್ತಿದ್ದು, ಅದ್ರಲ್ಲಿ ‘ತೆಲುಗು ಬಿಗ್ ಬಾಸ್ ಸೀಸನ್ 6’ ಪೂರ್ಣಗೊಂಡು ಫಿನಾಲೆ ನಡೆದಿದೆ.

ಅಕ್ಕಿನೇನಿ ನಾಗಾರ್ಜುನ ಅವರು ನಡೆಸಿಕೊಡುತ್ತಿರುವ ಶೋ 106 ದಿನಗಳನ್ನು ಪೂರ್ಣಗೊಳಿಸುವ ಮೂಲಕ ಪೂರ್ಣಗೊಂಡಿದೆ. ಫಿನಾಲೆಯಲ್ಲಿ ಗಾಯಕ ಎಲ್​.ವಿ. ರೇವಂತ್ ಟ್ರೋಫಿ ಎತ್ತಿದ್ದಾರೆ.

ಭಾನುವಾರ (ಡಿಸೆಂಬರ್ 18) ಬಿಗ್ ಬಾಸ್ ಫಿನಾಲೆ ನಡೆದಿದೆ. ಎಲ್​.ವಿ. ರೇವಂತ್, ಶ್ರೀಹಾನ್, ಆದಿ ರೆಡ್ಡಿ, ಕೀರ್ತಿ ಭಟ್ ಹಾಗೂ ರೋಹಿತ್ ಸಾಹ್ನಿ ಅಂತಿಮ ಹಂತ ತಲುಪಿದ್ದರು. ಇದರಲ್ಲಿ ಹೆಚ್ಚು ವೋಟ್ ಪಡೆದು ರೇವಂತ್ ಗೆದ್ದಿದ್ದಾರೆ. ಅವರಿಗೆ ಟ್ರೋಫಿ ಜತೆ 10 ಲಕ್ಷ ರೂಪಾಯಿ ನಗದು, 25 ಲಕ್ಷ ರೂಪಾಯಿ ಮೌಲ್ಯದ ಪ್ರಾಪರ್ಟಿ ಹಾಗೂ ಕಾರು ಬಹುಮಾನವಾಗಿ ಸಿಕ್ಕಿದೆ.

ಫಿನಾಲೆಯಲ್ಲಿ ‘ಧಮಾಕಾ’ ಜೋಡಿ ರವಿ ತೇಜಾ ಹಾಗೂ ಶ್ರೀಲೀಲಾ, ಹಿರಿಯ ನಟಿ ರಾಧಾ, ‘ಕಾರ್ತಿಕೇಯ 2’ ಖ್ಯಾತಿಯ ನಿಖಿಲ್ ಸಿದ್ದಾರ್ಥ್​ ವಿಶೇಷ ಅತಿಥಿಗಳಾಗಿ ‘ಬಿಗ್ ಬಾಸ್​’ ವೇದಿಕೆ ಏರಿದ್ದರು. ಬಾಲಿವುಡ್ ನಟಿ ಊರ್ವಶಿ ರೌಟೇಲಾ ವಿಶೇಷ ಹಾಡಿಗೆ ಹೆಜ್ಜೆ ಹಾಕಿ ಎಲ್ಲರನ್ನೂ ರಂಜಿಸಿದರು.

ರೇವಂತ್ ಅವರು ವೃತ್ತಿಯಲ್ಲಿ ಗಾಯಕ. ಅವರು ಕನ್ನಡ ಹಾಗೂ ತಮಿಳು ಹಾಡುಗಳನ್ನು ಹಾಡಿದ್ದಾರೆ. ‘ಇಂಡಿಯನ್ ಐಡಲ್ 9’ರ ವಿನ್ನರ್ ಕೂಡ ಹೌದು. ‘ಬಾಹುಬಲಿ 1’ ಚಿತ್ರದ ‘ಮನೋಹರಿ..’ ಹಾಡನ್ನು ಇವರೇ ಹಾಡಿದ್ದರು. ‘ಕಾಫಿ ವಿಥ್ ಮೈ ವೈಫ್’ ಸೇರಿ ಕೆಲವು ಕನ್ನಡದ ಸಿನಿಮಾದ ಹಾಡುಗಳಿಗೆ ಅವರು ಧ್ವನಿಯಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!