ಗುಜರಾತ್ ನಲ್ಲಿ 5 ಸ್ಥಾನ ಗೆದ್ದ ಆಮ್ ಆದ್ಮಿ: ಎತ್ತುವಿನಿಂದ ಹಾಲು ಕರೆದಷ್ಟು ದೊಡ್ಡ ಕೆಲಸ ಎಂದ ಕೇಜ್ರಿವಾಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 5 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಅಸ್ತಿತ್ವವನ್ನು ಭದ್ರಪಡಿಸಿದ್ದು, ಈ ಕುರಿತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಖುಷಿ ಹಂಚಿಕೊಂಡಿದ್ದಾರೆ.
ಗುಜರಾತ್ ನಲ್ಲಿ ಶೇ.14 ರಷ್ಟು ಮತಗಳನ್ನು ಗಳಿಸಿದೆ. ಇದು ಎತ್ತುವಿನಿಂದ ಹಾಲು ಕರೆದಷ್ಟು ಕಷ್ಟದ ಕೆಲಸವಾಗಿದೆ ಎಂದು ಬಣ್ಣಿಸಿದ್ದಾರೆ.
ಒಂದು ವರ್ಷದಲ್ಲಿ ನಾವು ಪಂಜಾಬ್ ಅನ್ನು ಪಡೆದುಕೊಂಡಿದ್ದೇವೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ (MCD), ಗೋವಾದಲ್ಲಿ 2 ಶಾಸಕರು ಹಾಗೂ ಗುಜರಾತ್‌ನಲ್ಲಿ ಶೇ.14 ರಷ್ಟು ಮತಗಳನ್ನು ಪಡೆಯುವ ಮೂಲಕ ನಮ್ಮ 5 ಶಾಸಕರು ಗೆದ್ದಿದ್ದಾರೆ ಎಂದರು.
ಎಲ್ಲರೂ ಹಸುವಿನಿಂದ ಹಾಲು ಕರೆಯುತ್ತಾರೆ. ಆದರೆ ನಾವು ಎತ್ತುವಿನಿಂದ ಹಾಲು ಕರೆದಿದ್ದೇವೆ. ಈ ಮೂಲಕ 2027ರಲ್ಲಿ ಗುಜರಾತ್‌ನಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!