ಬ್ರಾಹ್ಮಣ ಶಬ್ಧದ ಬಗ್ಗೆ ವಿವಾದಿತ ಪೋಸ್ಟ್​: ಕ್ಷಮೆಯಾಚಿಸಿದ ಖ್ಯಾತ ಗಾಯಕ ಲಕ್ಕಿ ಅಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬ್ರಾಹ್ಮಣ ಪದದ ಮೂಲ ಅಬ್ರಹಾಂ ಆಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌
ಮಾಡಿ ವಿವಾದಕ್ಕೆ ಗುರಿಯಾಗಿದ್ದ ಖ್ಯಾತ ಬಾಲಿವುಡ್‌ ಗಾಯಕ ಲಕ್ಕಿ ಅಲಿ ಇದೀಗ ತಮ್ಮ ಪೋಸ್ಟ್‌ಗೆ ಕ್ಷಮೆಯಾಚಿಸಿದ್ದು, ತಾವು ಮಾಡಿದ್ದ ಪೋಸ್ಟ್‌ ಅನ್ನು ಕೂಡ ಡಿಲೀಟ್‌ ಮಾಡಿದ್ದಾರೆ.

ಈ ಸಂಬಂಧ ಇದೀಗ ಫೇಸ್‌ಬುಕ್‌ನಲ್ಲಿ ಪೋಸ್ಟ್​​ ಮಾಡಿರುವ ಅವರು, ”ನನ್ನ ಹಿಂದಿನ ಪೋಸ್ಟ್‌ ವಿವಾದ ಹುಟ್ಟುಹಾಕಿದೆ. ನನ್ನ ಉದ್ದೇಶ ಯಾರಿಗೂ ನೋವುಂಟು ಮಾಡುವ ಅಥವಾ ಕೋಪವನ್ನು ಉಂಟುಮಾಡುವುದಾಗಿರಲಿಲ್ಲ. ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ” ಎಂದು ಹೇಳಿದ್ದಾರೆ.

“ನನ್ನ ಉದ್ದೇಶ ಎಲ್ಲರನ್ನೂ ಒಂದು ಮಾಡಬೇಕು ಅನ್ನೋದಾಗಿತ್ತು, ಆದರೆ
ನಾನಂದುಕೊಂಡ ರೀತಿಯಲ್ಲಿ ಜನರು ಅದನ್ನು ಅರ್ಥಮಾಡಿಕೊಂಡಿಲ್ಲ ಎಂದು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆ ನಾನು ಮಾಡುವ ಪೋಸ್ಟ್‌ಗಳ ಕುರಿತು ಹೆಚ್ಚು ಜಾಗರೂಕನಾಗಿರುತ್ತೇನೆ ಮತ್ತು ಹಿಂದೂ ಸಹೋದರ ಹಾಗೂ ಸಹೋದರಿಯರಿಗೆ ಬೇಸರ ಮೂಡಿಸಿರುವ ನನ್ನ ಬರೆವಣಿಗೆಯ ಶೈಲಿಯ ಬಗ್ಗೆಯೂ ಎಚ್ಚರ ವಹಿಸುತ್ತೇನೆ. ಅದಕ್ಕಾಗಿ ನಾನು ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ.” ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಹಿಂದಿನ ಪೋಸ್ಟ್‌ನಲ್ಲಿ ” ಬ್ರಾಹ್ಮಣರು ಇಬ್ರಾಹಿಂ ವಶಂಸ್ಥರು. ಬ್ರಾಹ್ಮಣ ಎಂಬ ಹೆಸರು ಬ್ರಹ್ಮ ಎಂದ ಪದದಿಂದ ಬಂದಿದ್ದು, ಅಬ್ರಹಾಂ ಅಥವಾ ಇಬ್ರಾಹಿಂ ಪದದಿಂದ ಸೃಷ್ಟಿಗೊಂಡಿದೆ. ಈ ಕುರಿತು ಕಾರಣವಿಲ್ಲದೆ ತಮ್ಮಲೇ ಏಕೆ ಹೊಡೆದಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದರು.

ಈ ಪೋಸ್ಟ್‌ ಕುರಿತಾಗಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ ತಮ್ಮ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿರುವ ಲಕ್ಕಿ ಅಲಿ, ಈ ಕುರಿತು ಕ್ಷಮೆ ಕೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!