ಆಂಡ್ರಾಯ್ಡ್ ಬಳಕೆದಾರರಿಗೆ ಗುಡ್‌ನ್ಯೂಸ್:‌ ಸ್ಟೋರೇಜ್‌ ಉಳಿಕೆಗೆ ಹೊಸ ಫೀಚರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಂಡ್ರಾಯ್ಡ್‌ ತಂತ್ರಜ್ಞಾನದ ಡೆವಲಪರ್‌ ಆಗಿರುವ ಗೂಗಲ್‌ ಇದೀಗ ಆಂಡ್ರಾಯ್ಡ್‌ ಬಳಕೆದಾರರಿಗೆ ಸಂತಸದ ಸುದ್ದಿಯನ್ನು ಹೊರತಂದಿದೆ. ಆಂಡ್ರಾಯ್ಡ್‌ ಫೋನ್‌ ಗಳಲ್ಲಿ ಸಾಮಾನ್ಯವಾಗಿ ತಲೆದೂರುವ ಸ್ಟೋರೇಜ್‌ ಸ್ಪೇಸ್‌ ಸಮಸ್ಯೆಯನ್ನು ಹೋಗಲಾಡಿಸಿಲು ʼಆಟೋ ಅರ್ಕೈವ್‌ʼ ಎಂಬ ಹೊಸ ಫೀಚರ್‌ ಅನ್ನು ಹೊರತರುವುದಾಗಿ ಹೇಳಿದೆ.

ಈ ಫೀಚರ್‌ ಆಂಡ್ರಾಯ್ಡ್‌ ಪೋನಿನಲ್ಲಿರುವ ಬಳಕೆಯಾಗದ ಅಪ್ಲಿಕೇಷನ್‌ ಗಳ (unused app) ಡೇಟಾವನ್ನು ಅರ್ಕೈವ್‌ ಮಾಡಲು ಸಹಾಯಕವಾಗಲಿದೆ. ಇದರಿಂದಾಗಿ ಮೊಬೈಲ್‌ ಸ್ಟೊರೇಜ್‌ ನಲ್ಲಿ ಬಳಕೆಯಾಗುತ್ತಿದ್ದ ಹೆಚ್ಚುವರಿ ಸ್ಪೇಸ್‌ ಬಳಕೆಗೆ ಸಿಗಲಿದೆ.

ಹಾಗೆಂದ ಮಾತ್ರಕ್ಕೆ ಇದು ಬಳಕೆದಾರರ ಡೇಟಾವನ್ನು ಅಳಿಸಿಹಾಕುವುದಿಲ್ಲ. ಬದಲಾಗಿ ಅತ್ಯಂತ ಕಡಿಮೆ ಬಳಸಲ್ಪಡುವ ಅಪ್ಲಿಕೇಷನ್‌ ಗಳ ಡೇಟಾವನ್ನು ಅರ್ಕೈವ್‌ ಮಾಡಲಿದೆ. ಅರ್ಥಾರ್‌ ಕ್ಲೌಡ್‌ ಸ್ಟೋರೇಜ್‌ ಇತ್ಯಾದಿಗಳಿಗೆ ಅವುಗಳನ್ನು ರವಾನಿಸುತ್ತದೆ. ಇದರಿಂದ ಮೊಬೈಲ್‌ ನಲ್ಲಿರುವ ಫಿಸಿಕಲ್‌ ಸ್ಟೊರೇಜ್‌ ಹೆಚ್ಚು ಬಳಕೆಗೆ ಸಿಗುತ್ತದೆ.

ಸ್ವಯಂ-ಆರ್ಕೈವ್ (ಆಟೋ ಅರ್ಕೈವ್) ಎಂಬುದು ಹೊಸ ವೈಶಿಷ್ಟ್ಯವಾಗಿದ್ದು, ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಅನ್‌ಇನ್‌ಸ್ಟಾಲ್ ಮಾಡುವ ಅಗತ್ಯವಿಲ್ಲದೇ Android ಬಳಕೆದಾರರು ತಮ್ಮ ಸಾಧನದಲ್ಲಿ ಸ್ಟೋರೇಜ್‌ ಅನ್ನು ಮುಕ್ತಗೊಳಿಸಲು ಅನುಮತಿಸುತ್ತದೆ. ಇದು ಮೊಬೈಲ್‌ ನಲ್ಲಿ ಬಳಕೆಯಾಗದ ಅಪ್ಲಿಕೇಷನ್‌ ಅನ್ನು ಭಾಗಶಃ ತೆಗೆದುಹಾಕುತ್ತದೆ ಆದರೆ ಅದರಲ್ಲಿನ ಬಳಕೆದಾರರ ಡೇಟಾವನ್ನು ಹಾಗೆಯೇ ಸಂರಕ್ಷಿಸಿಕೊಳ್ಳುತ್ತದೆ ಎಂದು ಗೂಗಲ್‌ ಹೇಳಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!