ಗಾಯಕ ಸಿಧು ಮೂಸೆವಾಲಾ ಮನೆಯಲ್ಲಿ ಸಂತಸ: 58ನೇ ವಯಸ್ಸಿಗೆ ಮತ್ತೆ ಗರ್ಭಿಣಿಯಾದ ತಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಮನೆಯಲ್ಲಿ ಮತ್ತೆ ಸಂತಸ ಮನೆ ಮಾಡಿದೆ.

ತಮ್ಮ 29ನೇ ವಯಸ್ಸಿಗೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಪಂಜಾಬಿ ಗಾಯಕ ನಟ ಸಿಧು ಮೂಸೆವಾಲಾ ಅವರ ತಾಯಿ ಚರಣ ಸಿಂಗ್ ಅವರು ತಮ್ಮ 58ನೇ ಇಳಿವಯಸ್ಸಿನಲ್ಲಿ ಮತ್ತೆ ಗರ್ಭಿಣಿಯಾಗಿದ್ದು, ಬರುವ ಮಾರ್ಚ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.

ಐವಿಎಫ್ ಚಿಕಿತ್ಸೆಯ ಮೂಲಕ ಸಿಧು ಮೂಸೆವಾಲಾ ಪೋಷಕರು 2ನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಸಿಧು ಮೂಸೆವಾಲಾ 2022ರ ಮೇ 29 ರಂದು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು.

ತಮ್ಮ ಮಗನ ಸಾವಿನವರೆಗೂ ಈ ದಂಪತಿ ಇನ್ನೊಂದು ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಆದರೆ ಎದೆಯೆತ್ತರಕ್ಕೆ ಬೆಳೆದು ನಿಂತ 29ರ ಹರೆಯದ ತಮ್ಮ ಏಕೈಕ ಪುತ್ರನ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದ ಈ ದಂಪತಿಯ ಬದುಕಿನಲ್ಲಿ ಈಗ ಹೊಸ ಆಶಾಕಿರಣ ಮೂಡಿದೆ. ಸಿಧು ತಾಯಿ ಮತ್ತೆ ಗರ್ಭಿಣಿಯಾಗಿದ್ದು, ಹೊಸ ಮಗುವಿನಲ್ಲಿ ಸಿಧುವನ್ನು ಕಾಣುವ ಮೂಲಕ ತಮ್ಮ ಚೊಚ್ಚಲ ಮಗನ ಅಗಲಿಕೆಯ ನೋವನ್ನು ಮರೆಯುವ ನಿರೀಕ್ಷೆಯಲ್ಲಿದ್ದಾರೆ.

ಪ್ರಸ್ತುತ ಸಿಧು ತಾಯಿ ವೈದ್ಯಕೀಯ ಕಾಳಜಿಯಲ್ಲಿದ್ದಾರೆ. 58ರ ಹರೆಯವಾಗಿರುವುದರಿಂದ ಬಹಳ ಕಾಳಜಿ ವಹಿಸಲಾಗಿದೆ.

ಸಿಧು ಮೂಸೆವಲಾ ಗುಂಡಿಕ್ಕಿ ಹತ್ಯೆ
ಪಂಜಾಬ್‌ನ ಮನ್ಸಾ ಜಿಲ್ಲೆಯಲ್ಲಿ ತಮ್ಮ ಸೋದರ ಸಂಬಂಧಿ ಹಾಗೂ ಸ್ನೇಹಿತನ ಜೊತೆ ತೆರಳುತ್ತಿದ್ದಾಗ ಸಿಧು ಅವರನ್ನು ಆರು ಜನ ಶೂಟರ್‌ಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ವೇಳೆ ಸಿಧು ಅವರು ಮನ್ಸಾದ ಜವಹರ್ಕೆ ಗ್ರಾಂಕ್ಕೆ ತೆರಳುತ್ತಿದ್ದರು. ಇವರ ಹತ್ಯೆ ಪ್ರಕರಣವನ್ನು ಪಂಜಾಬ್ ಪೊಲೀಸ್ ವಿಶೇಷ ತನಿಖಾ ತಂಡ ತನಿಖೆ ಮಾಡುತ್ತಿದೆ. ಈ ಕೊಲೆ ಪ್ರಕರಣ ಸಂಬಂಧ 32 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ. ಗ್ಯಾಂಗ್‌ಸ್ಟಾರ್‌ಗಳಾದ ಲಾರೆನ್ಸ್ ಬಿಷ್ಣೋಯ್, ಗೊಲ್ಡಿ ಬ್ರಾರ್‌, ಜಗ್ಗು ಭಗ್ವಾನ್‌ಪುರಿಯಾ ಹೆಸರು ಕೂಡ ಈ ಚಾರ್ಜ್‌ಶೀಟ್‌ನಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!